ಆಸ್ಟ್ರೇಲಿಯ: ಇನ್ನು 3 ತಿಂಗಳು ಮಳೆಯಿಲ್ಲ

Update: 2019-11-14 17:24 GMT
ಫೋಟೋ: aljazeera.com

ಸಿಡ್ನಿ, ನ. 14: ಆಸ್ಟ್ರೇಲಿಯದ ಪೂರ್ವ ಕರಾವಳಿಯಲ್ಲಿ ಹಬ್ಬುತ್ತಿರುವ 100ಕ್ಕು ಅಧಿಜಕ ಕಾಡ್ಗಿಚ್ಚುಗಳನ್ನು ಹತೋಟಿಗೆ ತರಲು ಅಗ್ನಿಶಾಮಕ ಸಿಬ್ಬಂದಿ ಹೋರಾಟ ನಡೆಸುತ್ತಿರುವಂತೆಯೇ, ಇನ್ನು ಕನಿಷ್ಠ ಮೂರು ತಿಂಗಳ ಕಾಲ ಮಳೆ ಸುರಿಯುವುದಿಲ್ಲ ಎಂದು ದೇಶದ ಹವಾಮಾನ ಇಲಾಖೆ ಗುರುವಾರ ಹೇಳಿದೆ.

ಒಂದು ವಾರದ ಅವಧಿಯಲ್ಲಿ ನ್ಯೂಸೌತ್‌ವೇಲ್ಸ್ ಮತ್ತು ಕ್ವೀನ್ಸ್‌ಲ್ಯಾಂಡ್ ರಾಜ್ಯಗಳಲ್ಲಿ ಹಬ್ಬಿರುವ ಕಾಡ್ಗಿಚ್ಚುಗಳು ಈವರೆಗೆ ನಾಲ್ವರನ್ನು ಕೊಂದಿವೆ, ನೂರಾರು ಮನೆಗಳನ್ನು ಸುಟ್ಟುಹಾಕಿವೆ ಹಾಗೂ 25 ಲಕ್ಷ ಎಕರೆ ಪ್ರದೇಶದಲ್ಲಿನ ಕೃಷಿ ಮತ್ತು ಕಾಡನ್ನು ನಾಶಪಡಿಸಿವೆ.

ಈ ವಲಯದಲ್ಲಿ ಮೂರು ವರ್ಷಗಳಿಂದ ಕಾಡುತ್ತಿರುವ ಬರದಿಂದಾಗಿ ಉಂಟಾಗಿರುವ ಒಣ ಹವಾಮಾನದಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಹವಾಮಾನ ಬದಲಾವಣೆಯೇ ಈ ವಲಯದಲ್ಲಿ ಬರ ಕಾಣಿಸಿಕೊಳ್ಳಲು ಕಾರಣ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ.

ಸರಿಯಾದ ಪ್ರಮಾಣದಲ್ಲಿ ಮಳೆ ಸುರಿಯದಿದ್ದರೆ ಕಾಡ್ಗಿಚ್ಚು ವಾರಗಳ ಕಾಲ ಉರಿಯುತ್ತದೆ ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News