ಇನ್ನು ಮುಂದೆ ಹುಲಿಯನ್ನು 'ನರಭಕ್ಷಕ' ಎಂದು ಕರೆಯುವಂತಿಲ್ಲ !

Update: 2019-11-15 13:07 GMT

ಚಾಮರಾಜನಗರ, ನ.15: ಹುಲಿಯನ್ನು ನರಭಕ್ಷಕ ಎಂದು ಇನ್ನು ಮುಂದೆ ಕರೆಯುವಂತಿಲ್ಲ ಎಂದು ಅಂತರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆದೇಶ ಹೊರಡಿಸಿದೆ. 

ಈ ಬಾರಿಯ ಪರಿಷ್ಕೃತ ಕಾರ್ಯವಿಧಿಯಲ್ಲಿ ಈ ಅಂಶವನ್ನು ಪ್ರಾಧಿಕಾರ ಸೇರ್ಪಡೆ ಮಾಡಿದೆ. ಹುಲಿಗಳು ಆಕಸ್ಮಾತ್‍ ಆಗಿ ಮನುಷ್ಯರನ್ನು ಕೊಂದಿರುವ ಸಾಧ್ಯತೆಯೂ ಇರುತ್ತದೆ. ಹೀಗೆ ಮನುಷ್ಯನನ್ನು ಆಕಸ್ಮಾತ್‍ ಆಗಿ ಕೊಲ್ಲುವ ಹುಲಿಗಳೆಲ್ಲವೂ ನರಭಕ್ಷಕ ಆಗಿ ಪರಿವರ್ತನೆಗೊಳ್ಳುತ್ತವೆ ಎನ್ನಲು ಸಾಧ್ಯವಿಲ್ಲ ಎಂದಿರುವ ಅರಣ್ಯ ಇಲಾಖೆ, ನರಭಕ್ಷಕ ಎನ್ನುವ ಬದಲು ನರಕಂಟಕ ಅಥವಾ ಮನುಷ್ಯರಿಗೆ ಅಪಾಯಕಾರಿಯಾದ ಪ್ರಾಣಿ ಎಂದು ಕರೆಯಬಹುದು ಎಂದಿದೆ.

ಈ ಮಧ್ಯೆ ಮನುಷ್ಯರಿಗೆ ಕಾಟ ಕೊಡುತ್ತಿದೆ ಎನ್ನುವುದು ಗೊತ್ತಾದರೆ, ಅದನ್ನು ತಕ್ಷಣ ಹಿಡಿಯುವ ಪ್ರಯತ್ನ ನಡೆಸಬೇಕು ಎಂದು ತಿಳಿಸಿದೆ. ಇನ್ನು, ಹುಲಿ ಬೇಟೆ (ಹಿಡಿಯುವ) ಕಾರ್ಯಾಚರಣೆಯಲ್ಲಿ ಯಾವುದೇ ಖಾಸಗಿ ವ್ಯಕ್ತಿಗಳ ಪ್ರವೇಶವನ್ನು (ಶಾರ್ಪ್ ಶೂಟರ್) ಅರಣ್ಯ ಇಲಾಖೆ ನಿರ್ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News