ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್‌ನಿಂದ ಇಂದ್ರಧನುಷ್ ಲಸಿಕಾ ಅಭಿಯಾನ

Update: 2019-11-15 17:45 GMT

ಬೆಂಗಳೂರು, ನ.15: ಕೇಂದ್ರ ಸರಕಾದ ಸೂಚನೆಯಂತೆ ಪ್ರಸಕ್ತ ಸಾಲಿನ ಡಿಸೆಂಬರ್‌ನಿಂದ ಮುಂದಿನ ಮಾರ್ಚ್‌ವರೆಗೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಯಾದಗಿರಿ, ರಾಯಚೂರು, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಹಾಗೂ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನಲ್ಲಿ ತೀವ್ರತರವಾದ ಇಂದ್ರಧನುಷ್ ಲಸಿಕಾ ಅಭಿಯಾನವನ್ನು ಆಯೋಜಿಸಲಾಗಿದೆ.

ಮೊದಲನೇ ಸುತ್ತು ಅಭಿಯಾನ 2019, ಡಿ.2ರಿಂದ ಪ್ರಾರಂಭಗೊಳ್ಳಲಿದೆ. ಹಾಗೆಯೇ ಎರಡನೇ ಸುತ್ತಿನ ಅಭಿಯಾನ 2020 ಜ.3ರಿಂದ, ಮೂರನೇ ಸುತ್ತು ಫೆ.3ರಿಂದ ಹಾಗೂ ನಾಲ್ಕನೇ ಸುತ್ತು ಮಾ.2 ರಿಂದ ಅಭಿಯಾನ ಪ್ರಾರಂಭಿಸಲು ಕೇಂದ್ರ ಸರಕಾರ ಸೂಚಿಸಿದೆ. ಈ ಅಭಿಯಾನವನ್ನು ಪ್ರತಿ ತಿಂಗಳು ಏಳು ದಿನಗಳ ಕಾಲ ನಿಯಮಿತ ಲಸಿಕಾ ದಿನವಾದ ಗುರುವಾರ, ಸಾರ್ವಜನಿಕ ರಜಾದಿನ ಹೊರತುಪಡಿಸಿ ನಡೆಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News