ವಿವಾದಾತ್ಮಕ ಸುತ್ತೋಲೆ ಖಂಡಿಸಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರತಿಕೃತಿ ದಹನ

Update: 2019-11-18 18:28 GMT

ಮಂಡ್ಯ, ನ.18: ಡಾ.ಬಿ.ಆರ್.ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರನ್ನು ವಜಾಗೊಳಿಸಿ, ದೇಶ ದ್ರೋಹ ಪ್ರಕರಣ ದಾಖಲಿಸಬೇಕು ಹಾಗೂ ಶಿಕ್ಷಣ ಸಚಿವರನ್ನು ಹೊಣೆಗಾರನ್ನಾಗಿ  ಮಾಡಿ ಸಚಿವ ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಸೋಮವಾರ ಮದ್ದೂರಿನಲ್ಲಿ ರಸ್ತೆ ತಡೆ ನಡೆಸಿ ಉಮಾಶಂಕರ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಜಿಪಂ ಮಾಜಿ ಅಧ್ಯಕ್ಷ ಕಂಠಿಸುರೇಶ್ ಮಾತನಾಡಿ, ಭಾರತವು ಪ್ರಪಂಚದಲ್ಲಿ ಅತಿದೊಡ್ಡದಾದ ಪ್ರಜಾಪ್ರಭುತ್ವ, ಜಾತ್ಯತೀತ ರಾಷ್ಟ್ರವಾಗಲು ಕಾರಣವಾಗಿರುವ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಮನುವಾದಿಗಳು ಹಾಗೂ ಬಿಜೆಪಿ ಮತ್ತು ಸಂಘಪರಿವಾರದವರು ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ಜಿಪಂ ಸದಸ್ಯ ಬೋರಯ್ಯ, ದಲಿತ ಸಂಘಟನೆಗಳ ಸಮನ್ವಯ ಸಮಿತಿ ಗೌರವಾಧ್ಯಕ್ಷ ಹೊಂಬಯ್ಯ, ಅಂದಾನಿ, ಅಧ್ಯಕ್ಷ ಕಬ್ಬಾಳಯ್ಯ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷರಾದ ಮರಿದೇವರು, ಕೃಷ್ಣ, ದೊರೆಸ್ವಾಮಿ, ಮಹದೇವು, ಮುಖಂಡರಾದ ಬಸವರಾಜು, ಪಾಪಣ್ಣ, ಮುತ್ತಯ್ಯ, ಶ್ರೀನಿವಾಸ್, ಸಣ್ಣಪ್ಪ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News