ಜೆಎನ್ ಯುನಲ್ಲಿ ಉಪಕುಲಪತಿ ಕಚೇರಿ, ವಿವೇಕಾನಂದ ಪ್ರತಿಮೆಗೆ ಹಾನಿ: ವಿದ್ಯಾರ್ಥಿಗಳ ವಿರುದ್ಧ ಎಫ್ ಐಆರ್

Update: 2019-11-19 09:58 GMT
ಫೋಟೊ: ANI

 ಹೊಸದಿಲ್ಲಿ, ನ.19: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ  ವೇಳೆ  ವಿವೇಕಾನಂದ ಪ್ರತಿಮೆ ಮತ್ತು ಉಪಕುಲಪತಿ ಕಚೇರಿಗೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ  ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ "ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವುದಕ್ಕೆ" ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.

ಇನ್ನೂ ಅನಾವರಣಗೊಳಿಸದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು  ಧ್ವಂಸ ಮಾಡಿರುವ  ಆರೋಪದಲ್ಲಿ  ಸ್ವಾಮಿ ವಿವೇಕಾನಂದ ಪ್ರತಿಮೆ ಸಮಿತಿ ಅಧ್ಯಕ್ಷ ಬುದ್ಧ ಸಿಂಗ್ ಶನಿವಾರ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಮೂಲಗಳ ಪ್ರಕಾರ, ಈವರೆಗೆ ಏಳು ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಆದರೆ, ಅವರ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

ಗುರುವಾರ ಕ್ಯಾಂಪಸ್‌ನಲ್ಲಿರುವ ಪೀಠದ ಪ್ರತಿಮೆಯಲ್ಲೂ ಆಕ್ಷೇಪಾರ್ಹ ಸಂದೇಶಗಳು ಕಂಡುಬಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News