ಬೀದರ್: ಹಿಂದೂಗಳನ್ನು ನಿಂದಿಸಿದ ಆರೋಪ; ಉವೈಸಿ ಸೇರಿ 33 ಜನರ ಖುಲಾಸೆ

Update: 2019-11-21 16:52 GMT

ಬೆಂಗಳೂರು, ನ.21: ಬೀದರ್ ಜಿಲ್ಲೆಯ ಹುಮ್ನಾಬಾದ್‌ನ ಡಾಬಾ ಬಳಿ ಎಐಎಂಐಎಂ ಕಾರ್ಯಕರ್ತರು ಹಿಂದೂಗಳ ವಿರುದ್ಧ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಸೇರಿ 33 ಆರೋಪಿಗಳನ್ನು ಖುಲಾಸೆಗೊಳಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶಿಸಿದೆ.

ಹುಮ್ನಾಬಾದ್ ಡಾಬಾವೊಂದರ ಬಳಿ ಎಐಎಂಐಎಂ ಕಾರ್ಯಕರ್ತರು ಹಾಗೂ ಉವೈಸಿ ಅವರು ಹಿಂದೂಗಳ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಪ್ರಕರಣವು 2017ರಲ್ಲಿ ಜನಪ್ರತಿನಿಧಿಗಳ ಕೋರ್ಟ್‌ಗೆ ವರ್ಗಾವಣೆಯಾಗಿತ್ತು. ಇಂದು ನ್ಯಾಯಪೀಠವು ಸಾಕ್ಷಾಧಾರಗಳ ಕೊರತೆಯಿದೆ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ಅಸದುದ್ದೀನ್ ಉವೈಸಿ ಸೇರಿ 33 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ. ಅರ್ಜಿದಾರರ ಪರವಾಗಿ ವಕೀಲ ಆರ್.ಕೋತ್ವಾಲ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News