×
Ad

ತುರ್ತು ಪರಿಸ್ಥಿತಿ ಸಂದರ್ಭ ರಾಷ್ಟ್ರಪತಿ ಭವನದ ದುರುಪಯೋಗವಾಗಿರಲಿಲ್ಲವೇ:? ನಳಿನ್‍ ಕುಮಾರ್

Update: 2019-11-23 23:22 IST

ಮಂಡ್ಯ, ನ.23: ಜನರ ನಿರೀಕ್ಷೆಯಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ರಚನೆಯಾಗಿದೆ. ಸಿಎಂ ಪಡ್ನವೀಸ್ ಅವರಿಗೆ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲು ಹೇಳಿದ್ದಾರೆ.

ಶನಿವಾರ ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಂತೆ ಅಲ್ಲಿಯೂ ವಿಭಿನ್ನ ನಡೆಯ ಎರಡು ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಜನಾದೇಶಕ್ಕೆ ಬೆಲೆ ಬಂದಿದೆ ಎಂದರು.

ರಾತ್ರೋರಾತ್ರಿ ರಾಷ್ಟ್ರಪತಿ ಆಡಳಿತ ವಾಪಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದ ಹಿತಕ್ಕಾಗಿ ರಾಷ್ಟ್ರಪತಿ ಭವನ, ಕೋರ್ಟ್‍ಗಳು ಕೆಲವು ವೇಳೆ ಕೆಲಸ ಮಾಡಬೇಕಾಗುತ್ತದೆ. ಹಿಂದೆ ತುರ್ತು ಪರಿಸ್ಥಿತಿ ಜಾರಿಯಾಗಿದ್ದ ಸಂದರ್ಭದಲ್ಲಿ ಆಗ ರಾಷ್ಟ್ರಪತಿ ಭವನದ ದುರುಪಯೋಗವಾಗಿರಲಿಲ್ಲವೇ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News