×
Ad

ಬಂಡಿಪುರ ಅರಣ್ಯದಲ್ಲಿ ಪ್ರಾಚೀನ ಅವಶೇಷಗಳು ಪತ್ತೆ

Update: 2019-11-23 23:29 IST

ಬೆಂಗಳೂರು, ನ.23: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿ 9ನೇ ಶತಮಾನದಿಂದ 16ನೇ ಶತಮಾನದ ಹಲವು ಪಾರಂಪರಿಕ ಪ್ರಾಚೀನ ಅವಶೇಷಗಳು ಪತ್ತೆಯಾಗಿವೆ.

ಉದ್ಯಾನದ ಮುಖ್ಯದ್ವಾರವನ್ನು ಇತ್ತೀಚೆಗೆ 5 ಕಿ.ಮೀ ದೂರದಲ್ಲಿರುವ ಮೇಲುಕಮ್ಮನಹಳ್ಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿನ ಮಾಹಿತಿ ಕೇಂದ್ರದ ಮುಂಭಾಗದಲ್ಲಿ 9ನೇ ಶತಮಾನದಿಂದ 16ನೇ ಶತಮಾನಕ್ಕೆ ಸೇರಿರುವ 4 ರಾವಣೇಶ್ವರ, 2 ಭೈರವ ದೇವರು, 3 ದುರ್ಗಾದೇವಿ, 5 ವೀರಗಲ್ಲು ಪತ್ತೆಯಾಗಿವೆ.

ಈ ಪ್ರಾಚೀನ ಅವಶೇಷಗಳನ್ನು ಉದ್ಯಾನದಿಂದ ಮೇಲುಕಮ್ಮನಹಳ್ಳಿಯ ಮುಖ್ಯ ದ್ವಾರದ ಒಳಗೆ ಸ್ಥಳಾಂತರಿಸಿ ಸೂಕ್ತ ವಿವರಣೆಯೊಂದಿಗೆ ಪ್ರದರ್ಶನಕ್ಕೆ ಇಡಬೇಕು. ಇದರಿಂದ ಪ್ರವಾಸಿಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಲ್ಲದೇ, ಪ್ರಾಚೀನ ಅವಶೇಷಗಳನ್ನು ಸಂರಕ್ಷಣೆ ಮಾಡಿದಂತೆ ಆಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಶೋಧಕ ಹಾಗೂ ಪ್ರಾಧ್ಯಾಪಕ ಡಾ. ಮುತ್ತುರಾಜು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News