ಪತ್ನಿಯ ಲೈಂಗಿಕ ಕ್ರಿಯೆಯ ವಿಡಿಯೋವನ್ನು ಕೋರ್ಟ್ ಗೆ ನೀಡಿ ವಿಚ್ಛೇದನ ಪಡೆದ ಪತಿ

Update: 2019-11-24 17:58 GMT

ಬೆಂಗಳೂರು, ನ.24: ಬೇರೊಬ್ಬ ವ್ಯಕ್ತಿಯ ಜೊತೆ ಪತ್ನಿಯು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋವೊಂದನ್ನು ಕೋರ್ಟ್‌ಗೆ ಸಾಕ್ಷಿಯಾಗಿ ನೀಡಿದ್ದನ್ನು ಪರಿಶೀಲನೆ ನಡೆಸಿ ಸಾಕ್ಷಿಯಾಗಿ ಪರಿಗಣಿಸಿರುವ ಹೈಕೋರ್ಟ್ ಬಳ್ಳಾರಿ ಮೂಲದ ಪತಿಗೆ ವಿಚ್ಛೇದನ ನೀಡಿ ಆದೇಶಿಸಿದೆ. 

ಬಳ್ಳಾರಿ ಜಿಲ್ಲೆಯ ವ್ಯಕ್ತಿಯು ಕಳೆದ 1991ಜುಲೈ 1 ರಂದು ಮಹಿಳೆಯೊಬ್ಬರನ್ನು ಮದುವೆಯಾಗಿದ್ದು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಲವು ವರ್ಷಗಳ ನಂತರ ಪತ್ನಿಯು ತನ್ನ ಸ್ನೇಹಿತನ ಜೊತೆ ಸಲುಗೆ ಬೆಳೆಸಿ ಅಕ್ರಮ ಸಂಬಂಧ ಹೊಂದಿರುವುದು ಕಂಡು ಬಂದಿತ್ತು. ಈ ಬಗ್ಗೆ ಪತಿಯು ಪ್ರಶ್ನಿಸಿದಾಗ ಪತ್ನಿಯು ನಿರಾಕರಿಸಿ ಜಗಳ ತೆಗೆದಿದ್ದಾಳೆ. ಆದರೆ ಪತ್ನಿಯ ಅಕ್ರಮ ಸಂಬಂಧವನ್ನು ಸಾಕ್ಷ್ಯ ಸಮೇತ ಪತ್ತೆ ಹಚ್ಚಲು ಮುಂದಾದ ಪತಿ 2008ರ ಜೂನ್ 4ರಂದು ಬೆಂಗಳೂರಿಗೆ ಹೋಗುತ್ತೇನೆ ಎಂದು ಪತ್ನಿಗೆ ಹೇಳಿ ಹೊರಟಿದ್ದಾರೆ. ಈ ವೇಳೆ ಪತ್ನಿಗೆ ಗೊತ್ತಾಗದಂತೆ ತನ್ನ ಬೆಡ್ ರೂಂನಲ್ಲಿ ವಿಡಿಯೋ ರೆಕಾರ್ಡರ್ ಇರಿಸಿದ್ದರು. ಈ ವೇಳೆ ಪತಿಯ ಸ್ನೇಹಿತನೊಂದಿಗೆ ಪತ್ನಿ ಲೈಂಗಿಕ ಸಂಪರ್ಕ ಹೊಂದಿದ್ದಳು ಎನ್ನಲಾಗಿದ್ದು, ಈ ಎಲ್ಲ ದೃಶ್ಯಗಳು ಪತಿ ಇರಿಸಿದ್ದ ಡಿವಿಆರ್ ನಲ್ಲಿ ರೆಕಾರ್ಡ್ ಆಗಿತ್ತು. ವಿಚ್ಛೇದನ ತೀರ್ಪು ನೀಡಿದ ಹೈಕೋರ್ಟ್, ವಿದ್ಯುನ್ಮಾನ ಸಾಕ್ಷವು ನೈಜತೆ ಮತ್ತು ಪ್ರಸ್ತುತತೆಯಿಂದ ಕೂಡಿದ್ದರೆ ಅದನ್ನು ನ್ಯಾಯಾಲಯ ಒಪ್ಪುತ್ತದೆ ಅಭಿಪ್ರಾಯಪಟ್ಟಿದೆ. 

ವಿಡಿಯೋವನ್ನು ಸಾಕ್ಷಿಯಾಗಿರಿಸಿಕೊಂಡು ಪತಿ ವಿಚ್ಛೇದನಕ್ಕಾಗಿ ಬಳ್ಳಾರಿಯ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿ ಪತ್ನಿಯ ವಿರುದ್ಧ ಕ್ರೌರ್ಯ ಮತ್ತು ವ್ಯಭಿಚಾರ ಆರೋಪ ಮಾಡಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಕ್ರೌರ್ಯ ಆರೋಪವನ್ನು ಕೈ ಬಿಟ್ಟು, ವ್ಯಭಿಚಾರ ಆರೋಪವನ್ನು ಪರಿಗಣಿಸಿತ್ತು. 2003 ಜುಲೈ 30ರಂದು ಇಬ್ಬರ ಮದುವೆಯನ್ನು ಅನೂರ್ಜಿತಗೊಳಿಸಿ ತೀರ್ಪು ನೀಡಿತ್ತು. ಪತ್ನಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಳು.

ಪತಿಗೆ ವಿಚ್ಛೇದನ ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಕೀಲರ ವಾದವನ್ನು ಆಲಿಸಿ, ದಂಪತಿಯ ಇಬ್ಬರು ಮಕ್ಕಳಲ್ಲಿ ಒಬ್ಬರು ಸಾಕ್ಷಿ ನೀಡಿದ್ದರು. 2008ರ ಜೂನ್ 4ರಿಂದ ಜೂನ್ 9ರವರೆಗೆ ತಾವು ತಾಯಿಯೊಂದಿಗೆ ಬಳ್ಳಾರಿಯ ನಿವಾಸದಲ್ಲಿ ಇದ್ದೆವು. ಆ ದಿನಗಳಲ್ಲಿ ತಂದೆ ನಮ್ಮ ಜೊತೆಗಿರಲಿಲ್ಲ ಎಂಬ ಹೇಳಿಕೆಯನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು. ಆರೋಪಿತ ವ್ಯಕ್ತಿಯ ಮೇಲೆ ವ್ಯಭಿಚಾರದ ಆರೋಪವನ್ನು ಮಾಡಿ ವಿಚ್ಛೇದನ ಪಡೆಯಬಹುದು. ಯಾಕೆಂದರೆ ಕರ್ನಾಟಕ ಹಿಂದೂ ವಿವಾಹ ನಿಯಮ 1956 ವ್ಯಬಿಚಾರವನ್ನು ಒಪ್ಪುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News