×
Ad

ಬೆದರಿಸಿ ದರೋಡೆ: ಮೂವರು ಆರೋಪಿಗಳ ಬಂಧನ

Update: 2019-11-24 23:08 IST

ಆನೇಕಲ್,ನ,24: ಆನೇಕಲ್ ಬ್ಯಾಗಡದೇನಹಳ್ಳಿ ಗೇಟ್ ಬಳಿ ಬಸ್ ಗಾಗಿ ನಿಂತಿದ್ದ ಯುವಕನಿಗೆ ಡ್ರಾಪ್ ಕೊಡುವ ನೆಪದಲ್ಲಿ ತಮ್ಮ ವಾಹನದಲ್ಲಿ ಕುಳ್ಳಿರಿಸಿಕೊಂಡು ಹೆದರಿಸಿ ವಂಚಿಸಿದ ಮೂವರು ಆರೋಪಿಗಳನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಹೊಂಪಲಘಟ್ಟ ಪ್ರತಾಪ್ (21) ಆಶ್ರಯ ದಿನ್ನೆಯ ವೇಣುಗೋಪಾಲ್(25) ಮತ್ತು ಬಸವರಾಜು(21)ರನ್ನು ಬಂಧಿಸಲಾಗಿದೆ.

ದೂರುದಾರ ತೇಜಾರಾಧ್ಯನನ್ನು ಇಬ್ಬರು ಆರೋಪಿಗಳು ತಮ್ಮ ಬೈಕ್ ನಲ್ಲಿ ಕುಳ್ಳಿರಿಸಿಕೊಂಡು ಆವಡದೇನಹಳ್ಳಿ ರೈಲ್ವೇ ಸೇತುವೆಯೆಡೆಗೆ ಕರೆದುಕೊಂಡು ಹೋಗಿ ಬೆದರಿಸಿ ಮೊಬೈಲ್ ಮತ್ತು ಪರ್ಸ್ ಕಸಿದು, ಎಟಿಎಂ ಪಿನ್ ಪಡೆದು ಪರಾರಿಯಾಗಿದ್ದರು ಎನ್ನಲಾಗಿದೆ.

ಪ್ರಕರಣದ ತನಿಖೆ ನಡೆಸಿದ ಎಸ್ಐ ಮುರಳಿ ಕೂಡಲೇ ತಂಡ ರಚಿಸಿ ಆರೋಪಿಗಳನ್ನು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News