ಮೂರು ತಿಂಗಳಿಗೊಮ್ಮೆ ಕಡ್ಡಾಯ ರಕ್ತ ತಪಾಸಣೆಗೆ ಆರೋಗ್ಯ ಇಲಾಖೆ ಆದೇಶ

Update: 2019-11-24 18:09 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.24: ಡಯಾಲಿಸಿಸ್ ರೋಗಿಗಳಿಗೆ ರಕ್ತನಿಧಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ಉಚಿತವಾಗಿ ರಕ್ತ ತಪಾಸಣೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡುವ ವೇಳೆ ರೋಗಿಗಳಲ್ಲಿ ಹೈಪಟೈಟಿಸ್ ಸಿ ವೈರಸ್(ಎಚ್‌ಸಿವಿ) ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಕಡ್ಡಾಯವಾಗಿ ರಕ್ತ ತಪಾಸಣೆಗೆ ಇಲಾಖೆ ಸೂಚಿಸಿದೆ.

ಪ್ರಸ್ತುರ ಜಿಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಕ್ತ ನಿಧಿ ಕೇಂದ್ರಗಳಲ್ಲಿ ಡಯಾಲಿಸಿಸ್ ರೋಗಿಗಳಿಗೆ ಕನಿಷ್ಠ ಮೂರು ತಿಂಗಳಿಗೊಮ್ಮೆ ಇಲಿಸಾ ವಿಧಾನದ ಮೂಲಕ ಎಚ್‌ಐವಿ, ಎಚ್‌ಬಿವಿ ಮತ್ತು ಎಚ್‌ಸಿವಿ ಸೋಂಕು ಪರೀಕ್ಷೆ ಮಾಡಿ ವರದಿಯನ್ನು ddmedicalhfws@karnataka.gov.in ಗೆ ಸಲ್ಲಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.

ರಾಜ್ಯದ ಮೂರು ಪ್ರಧಾನ ಆಸ್ಪತ್ರೆಗಳು, 20 ಜಿಲ್ಲಾಸ್ಪತ್ರೆಗಳು ಹಾಗೂ 148 ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯವನ್ನು 2017 ರಿಂದ ಉಚಿತವಾಗಿ ಎಲ್ಲ ವರ್ಗದವರಿಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದ 163 ಆಸ್ಪತ್ರೆಗಳಲ್ಲಿ ಈವರೆಗೆ ಅಂದಾಜು 3, 856 ರೋಗಿಗಳು ಈ ಸೌಲಭ್ಯವನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News