ದಾವಣಗೆರೆ: ಶಿಕ್ಷಣ ಇಲಾಖೆಯ ಸುತ್ತೋಲೆ ಖಂಡಿಸಿ ಅರೆಬೆತ್ತಲೆ ಮೆರವಣೆಗೆ, ಅಣುಕು ಶವಯಾತ್ರೆ

Update: 2019-11-25 18:04 GMT

ದಾವಣಗೆರೆ, ನ.25: ಡಾ.ಬಿ.ಆರ್.ಅಂಬೇಡ್ಕರ್ ಅವರರೊಬ್ಬರೆ ಸಂವಿಧಾನ ಬರೆದಿಲ್ಲ ಎಂದ ಶಿಕ್ಷಣ ಇಲಾಖೆಯ ಸುತ್ತೋಲೆ ಖಂಡಿಸಿ ದಲಿತ ಸಂಘರ್ಷ ಸಮಿತಿ(ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಸೋಮವಾರ ನಗರದಲ್ಲಿ ಅರೆಬೆತ್ತಲೆ ಮೆರವಣೆಗೆ ನಡೆಸಿದರು. 

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಬಿಜೆಪಿ ಮುಖಂಡ ಚಿ.ನಾ.ರಾಮು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಹಾಗೂ ಬಾಬಾ ರಾಮದೇವ ಅವರ ಅಣುಕು ಶವಯಾತ್ರೆ ನಡೆಸಿ ಸಂವಿಧಾನ ವಿರೋಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. 

ಸಿಎಂಸಿಎ ಸಂಸ್ಥೆಯ ಮಾಲೀಕರ ವಿರುದ್ದ ದೇಶ ದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. 

ಈ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ಮಾತನಾಡಿ, ಸಚಿವ ಸುರೇಶ್ ಕುಮಾರ್. ಆರೆಸ್ಸೆಸ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ, ಸಿಎಂಸಿಎ ಸಂವಿಧಾನವನ್ನು ಅವರೊಬ್ಬರೆ ಬರೆದಿಲ್ಲ ಎನ್ನುವ ಸುತ್ತೋಲೆ ಹೊರಡಿಸಿದ್ದಾರೆ. ಇದು ಅಂಬೇಡ್ಕರವರಿಗೆ ಅವಮಾನ. ಬಿಜೆಪಿ ಮುಖಂಡ ಚಿ.ನಾ.ರಾಮು ಮೀಸಲಾತಿ ಕೊನೆಗಾಣಿಸಲಿಕ್ಕೆ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಬಾಬಾ ರಾಮದೇವ್ ಸಂದರ್ಶನವೊಂದರಲ್ಲಿ ಡಾ.ಅಂಬೇಡ್ಕರ ಮತ್ತು ಪರಿಯಾರ್ ದೇಶದ್ರೋಹಿಗಳು ಎಂದು ಹೇಳಿದ್ದಾರೆ. ಈ ಕೂಡಲೇ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂಬೇಡ್ಕರ ಅವರ ಅವಮಾನ ಮಾಡಿದವರ ಮೇಲೆ ದೇಶ ದ್ರೋಹದ ಪ್ರಕರಣ ದಾಖಲಿಸಿ ಎಂದು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಕೋಗಲೂರು ಕುಮಾರ್, ವಿಜಯಲಕ್ಷ್ಮಿ, ಗಂಗನಕಟ್ಟೆ ಹನುಮಂತಪ್ಪ, ಮಂಜುಕುಂದವಾಡ, ಜಿಗಳಿ ಹಾಲೇಶ್, ನಿಟ್ಟೂರು  ಕೃಷ್ಣಪ್ಪ, ನಾಗರಾಜ್, ಪರಮೇಶ್ ಪುರದಾಳ್, ಮಹಾಂತೇಶ್ ಹಾಲವರ್ತಿ, ಪ್ರದೀಪ್, ಬೇತೂರು ಮಹಾಂತೇಶ್, ತೀಪ್ಪೇಶ್ ತಿಮ್ಮೇನಹಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News