ರಾಘವೇಶ್ವರ ಶ್ರೀಗಳು ತನಿಖೆ ಎದುರಿಸಿ ಏಕೆ ಆರೋಪ ಮುಕ್ತರಾಗಬಾರದು: ಹೈಕೋರ್ಟ್ ಪ್ರಶ್ನೆ

Update: 2019-11-25 18:25 GMT

ಬೆಂಗಳೂರು, ನ.25: ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ರಾಘವೇಶ್ವರ ಶ್ರೀಗಳು ತನಿಖೆ ಎದುರಿಸಿ ಯಾಕೆ ಆರೋಪ ಮುಕ್ತರಾಗಬಾರದೆಂದು ಮೌಖಿಕವಾಗಿ ಪ್ರಶ್ನಿಸಿರುವ ಹೈಕೋರ್ಟ್ ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿದೆ.

ಅಕ್ರಮಗಳ ಬಗ್ಗೆ ತನಿಖೆ ಕೋರಿ ಈಶ್ವರ ಭಟ್, ಜೆ.ಕೃಷ್ಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಶ್ರೀಗಳ ಪರ ವಾದಿಸಿದ ವಕೀಲರು, ರಾಘವೇಶ್ವರ ಶ್ರೀಗಳ ವಿರುದ್ಧ ಒಂದು ವರ್ಗದವರು ಯಾವುದೇ ದಾಖಲೆಗಳು ಇಲ್ಲದೆಯೇ ಆರೋಪಿಸುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಆರೋಪ ಬಂದಾಗ ರಾಜಕಾರಣಿಗಳು ತನಿಖೆಗೆ ಸಿದ್ಧವಿದ್ದೇವೆ ಎನ್ನುತ್ತಾರೆ. ಅದೇ ರೀತಿಯಾಗಿ ರಾಘವೇಶ್ವರ ಶ್ರೀಗಳಲ್ಲಿ ವಿಶ್ವಾಸವಿದ್ದರೆ ತನಿಖೆ ಎದುರಿಸಿ ಯಾಕೆ ಆರೋಪ ಮುಕ್ತರಾಗಬಾರದೆಂದು ಮೌಖಿಕವಾಗಿ ಪ್ರಶ್ನಿಸಿ, ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News