ಕೃಷಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
Update: 2019-11-25 23:58 IST
ಬೆಂಗಳೂರು, ನ. 25: 2019-20ನೆ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೃಷಿ ಪ್ರಶಸ್ತಿ(ಬೆಳೆ ಸ್ವರ್ಧೆ)ಗಾಗಿ ಭಾಗವಹಿಸಲಿಚ್ಛಿಸುವ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಎಲ್ಲ ಮಟ್ಟಗಳಿಗೂ (ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಕೃಷಿ ಪಶಸ್ತಿಗೆ) ಅನ್ವಯಿಸುವಂತೆ ನಿಗದಿತ ನಮೂನೆಯಲ್ಲಿ ಒಂದೇ ಅರ್ಜಿಯನ್ನು ಸಲ್ಲಿಸಬೇಕು. ಪ್ರವೇಶ ಶುಲ್ಕ ಎಸ್ಸಿ-ಎಸ್ಟಿ ವರ್ಗದ ರೈತರಿಗೆ 25 ರೂ. ಮತ್ತು ಸಾಮಾನ್ಯ ರೈತರಿಗೆ 100 ರೂ., 2019-20ನೆ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ರೈತರು ಅರ್ಜಿ ಸಲ್ಲಿಸಲು 2019ರ 30ನೆ ನವೆಂಬರ್ ಕೊನೆಯ ದಿನ.
ಬೆಳೆಗಳ ವಿವರಗಳು, ಅರ್ಜಿ ನಮೂನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ವಿಸ್ತರಣಾ ಕಾರ್ಯಕರ್ತರನ್ನಾಗಲಿ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನಾಗಲಿ ಸಂಪರ್ಕಿಸುವಂತೆ ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.