ಕಾರ್ಯಕರ್ತರಿಗೆ ಹಣ ಹಂಚಿದ ಉಪಮುಖ್ಯಮಂತ್ರಿ ಕಾರಜೋಳ: ವಿಡಿಯೋ ವೈರಲ್
Update: 2019-11-26 17:50 IST
ಅಥಣಿ, ನ.26: ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಪರ ಪ್ರಚಾರಕ್ಕೆ ಬಂದಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕಾರ್ಯಕರ್ತರೊಬ್ಬರಿಗೆ 500 ಮುಖಬೆಲೆಯ ನೋಟುಗಳನ್ನು ಹಂಚಿದ್ದಾರೆನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಣ ನೀಡಿದ ನಂತರ, ವಿಡಿಯೋ ಮಾಡುತ್ತಿದ್ದ ಛಾಯಾಗ್ರಾಹಕರಿಗೆ ಕ್ಯಾಮೆರಾ ಆಫ್ ಮಾಡಿ ಎಂದು ಹೇಳಿದ್ದಾರೆ. ಬೀದರ್ ಸಂಸದ ಭಗವಂತ ಖೂಬಾ ಹಾಗೂ ರಾಯಬಾಗ ಶಾಸಕ ಡಿ.ಎಂ.ಐಹೊಳೆ ಕೂಡ ಡಿಲೀಟ್ ಮಾಡುವಂತೆ ಹೇಳಿದ್ದಾರೆ. ಸಂಸದ ಖೂಬಾ ಕ್ಯಾಮೆರಾ ಕಸಿದುಕೊಳ್ಳುವುದಕ್ಕೆ ಯತ್ನಿಸಿದ್ದು ವಿಡಿಯೋದಲ್ಲಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೆರವಣಿಗೆಗೆ ಮುನ್ನ ಈ ಘಟನೆಯು ಮಹೇಶ್ ಕುಮಠಳ್ಳಿ ಮನೆಯಲ್ಲಿ ನಡೆದಿದೆ ಎನ್ನಲಾಗಿದೆ.