ಭೌತಿಕವಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Update: 2019-11-26 17:03 GMT

ಬೆಂಗಳೂರು, ನ.26: ಪ್ರೌಢ ಶಿಕ್ಷಣ ಮಂಡಳಿಯು ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುವ ಅರ್ಹ ವಿದ್ಯಾರ್ಥಿಗಳ ನೋಂದಣಿಯನ್ನು ಭೌತಿಕವಾಗಿ ಮಂಡಳಿಗೆ ಸಲ್ಲಿಸಲು ಹಾಗೂ ಪರೀಕ್ಷಾ ಶುಲ್ಕ ನೆಫ್ಟ್ ಮೂಲಕ ಜಮೆ ಮಾಡುವ ದಿನಾಂಕವನ್ನು ವಿಸ್ತರಿಸಲಾಗಿದೆ.

ಮಾರ್ಚ್ ಹಾಗೂ ಏಪ್ರಿಲ್ -2020 ರಲ್ಲಿ ನಡೆಯುವ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳ, ಖಾಸಗಿ ಅಭ್ಯರ್ಥಿಗಳ ಹಾಗೂ ಪುನರಾವರ್ತಿತ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಎಲ್ಲ ಅಭ್ಯರ್ಥಿಗಳು 100 ರೂ.ಗಳ ದಂಡ ಶುಲ್ಕದೊಂದಿಗೆ ಹಿಂದಿನ ಸಾಲಿನಂತೆ ಭೌತಿಕವಾಗಿ ನೆಫ್ಟ್ ಚಲನ್ ಮೂಲಕ ಬ್ಯಾಂಕ್‌ಗೆ ಪಾವತಿಸಲು ನ.30 ರಂದು ಅಂತಿಮ ದಿನವಾಗಿತ್ತು. ಇದೇ ವಿದ್ಯಾರ್ಥಿಗಳು ಮಾಹಿತಿಯ ಅನುಬಂಧ ಮತ್ತು ಬ್ಯಾಂಕ್ ಚಲನ್‌ನೊಂದಿಗೆ ಭೌತಿಕವಾಗಿ ಮಂಡಳಿಗೆ ಡಿ.2 ರೊಳಗೆ ಸಲ್ಲಿಸಬೇಕಿದೆ.

ಸದರಿ ವಿದ್ಯಾರ್ಥಿಗಳ ನೋಂದಣಿಯನ್ನು ಆನ್‌ಲೈನ್ ಮುಖಾಂತರ ಅಪ್‌ಲೋಡ್ ಮಾಡಲು ಅವಕಾಶವಿರುವುದಿಲ್ಲ. ಹೀಗಾಗಿ, ಮಂಡಳಿಯು ನಿಗದಿಪಡಿಸಿರುವ ಅನುಬಂಧದಲ್ಲಿ ವಿದ್ಯಾರ್ಥಿಯ ವಿವರಗಳನ್ನು ಭರ್ತಿಮಾಡಿ ಭಾವಚಿತ್ರ ಅಂಟಿಸಿ ಮತ್ತು ವಿದ್ಯಾರ್ಥಿಯ ಸಹಿಯನ್ನು ನಿಗದಿತ ಸ್ಥಳದಲ್ಲಿ ಮಾಡಿಸಿ ಮಂಡಲಿಗೆ ಭೌತಿಕವಾಗಿ ಸಲ್ಲಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News