×
Ad

'ಕಾಂಗ್ರೆಸ್ ಗೆ ಜಯವಾಗಲಿ' ಎಂದ ಅನರ್ಹ ಶಾಸಕ ಎಂಟಿಬಿ ನಾಗರಾಜ್ !

Update: 2019-11-27 17:56 IST

ಬೆಂಗಳೂರು, ನ. 27: ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು 'ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ’ ಎಂದು ಹೇಳಿದ ಪ್ರಸಂಗ ನಡೆಯಿತು.

ಬುಧವಾರ ಹೊಸಕೋಟೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಅವರು, ಸಮಾರಂಭವೊಂದರಲ್ಲಿ ಭಾಷಣ ಮಾಡುತ್ತಿದ್ದರು. ಭಾಷಣದ ಕೊನೆಯಲ್ಲಿ ಎಂಟಿಬಿ ನಾಗರಾಜ್, ‘ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ’ ಎಂದು ಹೇಳಿದರು. ಬಳಿಕ ಎಚ್ಚೆತ್ತುಕೊಂಡ ಅವರು 'ನಾನು ಇನ್ನೂ ಹಳೇ ಪಕ್ಷದ ನೆನಪಲ್ಲೆ ಇದ್ದೇನೆ. ಬಿಜೆಪಿಗೆ ಜಯವಾಗಲಿ' ಎಂದು ಘೋಷಣೆ ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News