×
Ad

ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Update: 2019-11-27 23:44 IST

ಮಂಡ್ಯ, ನ.27: ಮದ್ದೂರು ತಾಲೂಕಿನ ಕೆರೆಮೇಗಲದೊಡ್ಡಿ ಗ್ರಾಮದ ಸಮೀಪದ ಶಿವಾರಗುಡ್ಡದಲ್ಲಿ ಚಿರತೆಯೊಂದು ಬೋನಿಗೆ ಮಂಗಳವಾರ ತಡರಾತ್ರಿ ಸೆರೆಯಾಗಿದೆ.

ಹಲವು ದಿನಗಳಿಂದ ಶಿವಾರ, ಕೆರೆಮೇಗಲದೊಡ್ಡಿ ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರು ಆತಂಕಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಶಿವಾರಗುಡ್ಡದ ಹಿಂಭಾಗದ ತೋಟದ ರಸ್ತೆಯ ಬಳಿ ಇರಿಸಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.
ಸೆರೆಸಿಕ್ಕ ಚಿರತೆಯನ್ನು ಅರಣ್ಯಾಧಿಕಾರಿಗಳು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News