ಶ್ರೀನಿವಾಸರಾಜು ಜನ್ಮದಿನದ ನೆನಪಿಗಾಗಿ ಹೊಸ ಯೂನಿಕೋಡ್‌ ಫಾಂಟ್‌ಗಳು ಬಿಡುಗಡೆ

Update: 2019-11-28 08:43 GMT
ಶ್ರೀನಿವಾಸರಾಜು

ಬೆಂಗಳೂರು : ಲೇಖಕ, ಹಿರಿಯ ಚಿಂತಕ ಶ್ರೀನಿವಾಸರಾಜು ಅವರ ಎಪ್ಪತ್ತೈದನೆಯ ಜನ್ಮದಿನದ ನೆನಪಿನಲ್ಲಿ ಶ್ರೀನಿವಾಸರಾಜು ಕುಟುಂಬ 'ಶ್ರೀರಾಜು' ಹೆಸರಿನಲ್ಲಿ ಉಚಿತವಾದ ನಾಲ್ಕು ಹೊಸ ಯೂನಿಕೋಡ್‌ ಫಾಂಟ್‌ಗಳನ್ನು ಬಿಡುಗಡೆ ಮಾಡಿದೆ. 

ಇಂದು ಶ್ರೀನಿವಾಸರಾಜು ಅವರ ಹುಟ್ಟುಹಬ್ಬವಾಗಿದ್ದು, ಈ ಸಂದರ್ಭ ಇನ್ನೆರಡು ಫಾಂಟ್‌ಗಳನ್ನು ಬಿಡುಗಡೆ ಮಾಡಿದ್ದು, ಆರು ವಿನ್ಯಾಸಗಳಿರುವ ಕನ್ನಡದ ಮೊತ್ತ ಮೊದಲ ಯೂನಿಕೋಡ್‌ ಫಾಂಟ್‌ ಇದಾಗಿದೆ. ಆರು ವಿನ್ಯಾಸಗಳಿರುವ ಕನ್ನಡದ ಏಕೈಕ ಯೂನಿಕೋಡ್‌ ಫಾಂಟ್‌ ಇದಾಗಿದ್ದು, ರೆಗ್ಯುಲರ್‌, ರೆಗ್ಯುಲರ್‌ ಇಟಾಲಿಕ್‌, ಬೋಲ್ಡ್‌, ಬೋಲ್ಡ್‌ ಇಟಾಲಿಕ್‌, ಔಟ್‌ ಲೈನ್‌, ಔಟ್‌ ಲೈನ್‌ ಇಟಾಲಿಕ್‌ ರೂಪದಲ್ಲಿ ಲಭ್ಯ ಇವೆ.

ಕಲಾವಿದ ನಾಗಲಿಂಗಪ್ಪ ಬಡಿಗೇರ್ ಅವರು ಕನ್ನಡದ ಈ ಲಿಪಿಯನ್ನು ಸಿದ್ಧಪಡಿಸಿದವರು . ಕಡಿಮೆ ಸ್ಥಳವನ್ನು ಆಕ್ರಮಿಸಿ ಕೊಳ್ಳುವಂತೆ ಈ ಅಕ್ಷರಗಳನ್ನು ವಿನ್ಯಾಸ ಮಾಡಲಾಗಿದೆ. ಇದನ್ನು ಲಿಖಿತ್‌ ಸಾಫ್ಟ್‌ವೇರ್‌ನ ಹರೀಶ್‌ ಸಾಲಿಗ್ರಾಮ ಡಿಜಿಟಲ್‌ ರೂಪಕ್ಕೆ ಅಭಿವೃದ್ಧಿಪಡಿಸಿದ್ದಾರೆ.

https://bit.ly/2sdDknE ಈ ಲಿಂಕ್‌ ಕ್ಲಿಕ್‌ ಮಾಡಿ ಆರೂ ಫಾಂಟ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News