×
Ad

ಪರಿಹಾರ ನೀಡದ ಸರಕಾರ: ರಾಜ್ಯದ ಜನತೆಯ ಸಹಾಯ ಕೇಳಿದ ನೆರೆಹಾವಳಿ ಸಂತ್ರಸ್ತ

Update: 2019-11-28 23:14 IST

ಬೆಂಗಳೂರು, ನ.28: ಗದಗ ಜಿಲ್ಲೆಯ ಹೊಳೆ ಹಾಲೂರು ಗ್ರಾಮದ ನಿವಾಸಿ ಕಾಶಿನಾಥ್‌ರವರ ಮನೆ ನೆರೆ ಹಾವಳಿಗೆ ಸಿಲುಕಿ ಧ್ವಂಸಗೊಂಡಿದೆ. ಸರಕಾರದ ಯಾವ ಪರಿಹಾರವು ಇದುವರೆಗೂ ಸಿಕ್ಕಿಲ್ಲ ಎನ್ನಲಾಗಿದ್ದು, ಹೀಗಾಗಿ ರಾಜ್ಯದ ಜನತೆಯಿಂದ ಪರಿಹಾರ ಕೋರಿ ಮನವಿ ಮಾಡಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದೇವೆ. ಪರಿಹಾರಕ್ಕಾಗಿ ಸರಕಾರಿ ಕಚೇರಿಗೆ ಅಲೆದು ಸಾಕಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುವಷ್ಟು ಆರ್ಥಿಕವಾಗಿ ಸಬಲರಾಗಿಲ್ಲ. ಹೀಗಾಗಿ ರಾಜ್ಯದ ಜನತೆಯ ನಮಗೆ ಆರ್ಥಿಕವಾಗಿ ನೆರವಾಗಿ, ನಮ್ಮ ಬದುಕಿಗೆ ಆಸರೆಯಾಗಬೇಕೆಂದಿದ್ದಾರೆ.

ನೆರವು ನೀಡಲು ಬಯಸುವವರು ಕಾಶಿನಾಥ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಖಾತೆ ಸಂಖ್ಯೆ-17194029499, IFSC Code:KvGB0006311ಗೆ ಆರ್ಥಿಕ ನೆರವು ನೀಡಬೇಕೆಂದು ಪ್ರಕಟನೆಯಲ್ಲಿ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News