×
Ad

ಶಾಸಕ ತಮ್ಮಣ್ಣ ಹೇಳಿಕೆಗೆ ಮುಂಬೈ ಕನ್ನಡಿಗರ ಆಕ್ರೋಶ

Update: 2019-11-29 22:32 IST

ಮಂಡ್ಯ, ನ.29: ಕೆ.ಆರ್.ಪೇಟೆ ಚುನಾವಣಾ ಪ್ರಚಾರ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ವಿರುದ್ಧ ಮುಂಬೈ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ನಾರಾಯಣಗೌಡರನ್ನು ಗೆಲ್ಲಿಸಿದರೆ ಕೆ.ಆರ್.ಪೇಟೆಯನ್ನು ಕಾಮಾಟಿಪುರ ಮಾಡುತ್ತಾನೆಂದು ಕೆ.ಅರ್.ಪ್ಭೆಟೆಯಲ್ಲಿ ನಡೆದಿದ್ದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಡಿ.ಸಿ.ತಮ್ಮಣ್ಣ ಟೀಕಿಸಿದ್ದರು.

ಕೆ.ಆರ್.ಪೇಟೆಯಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಮುಂಬೈ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ರಂಗಪ್ಪ ಸಿ.ಗೌಡ, ತಮ್ಮಣ್ಣ ಹೇಳಿಕೆಯಿಂದ ನಮಗೆ ತುಂಬಾ ನೋವಾಗಿದೆ. ಇದು ಇಡೀ ಮುಂಬೈ ಕನ್ನಡಿಗರಿಗೆ ಮಾಡಿದ ಅಪಮಾನ. ಕ್ಷಮೆಯಾಚಿಸದಿದ್ದರೆ ಪ್ರತಿಭಟಿಸಬೇಕಾಗುತ್ತದೆ ಎಂದರು.

ಅವರ ಹೇಳಿಕೆ ಕೇವಲ ನಾರಾಯಣಗೌಡರಿಗೆ ಹೇಳಿದ್ದಲ್ಲ, ಇಡೀ ಮುಂಬೈ ಕನ್ನಡಿಗರಿಗೆ ಮಾಡಿದ ಅಪಮಾನ. ಕೆ.ಆರ್.ಪೇಟೆಯ ಸುಮಾರು 12 ಸಾವಿರ ಮತದಾರರು ಮುಂಬೈನಲ್ಲಿ ಇದ್ದೀವಿ. ಅದರಲ್ಲಿ ಕನಿಷ್ಠ ಐದಾರು ಸಾವಿರ ಮಂದಿ ಕೆ.ಆರ್.ಪೇಟೆಗೆ ಬಂದು ಮತ ಹಾಕ್ತೀವಿ ಎಂದು ಅವರು ಹೇಳಿದರು.

ಹೊಟೇಲಿನಲ್ಲಿ ಕೆಲಸ ಮಾಡೋದು ತಪ್ಪಾ? ನಾವು ಬಾಂಬೆಗೆ ಹೋಗಿ ತಟ್ಟೆ, ಲೋಟ ತೊಳೆದು ಗೌರವಯುತವಾಗಿ ಬದುಕು ಕಟ್ಟಿಕೊಂಡಿದ್ದೇವೆ. ಇನ್ನೇನು ಕಳ್ಳತನ, ದರೋಡೆ ಮಾಡಬೇಕಿತ್ತ? ಎಂದು ಅವರು ಕಿಡಿಕಾರಿದರು.

ಮುಂಬೈ ಕನ್ನಡಿಗರಾದ ರಾಜೇಗೌಡ, ಗಂಗಾಧರಗೌಡ, ಬಾಂಬೆ ಮೂರ್ತಿ, ತಮ್ಮಣ್ಣಗೌಡ ಸೋಮಶೇಖರ್ ಜೆ.ಗೌಡ, ಬೋರೇಗೌಡ, ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News