ಶಿಕ್ಷಣ, ಆರೋಗ್ಯ ಇಲಾಖೆ ನೌಕರರಿಗೆ 15 ಸಾಂದರ್ಭಿಕ, 2 ಪರಿಮಿತ ರಜೆ

Update: 2019-11-30 18:00 GMT

ಬೆಂಗಳೂರು, ನ. 30: ಶಿಕ್ಷಣ ಮತ್ತು ಆರೋಗ್ಯ ಇಲಾಖೆ ನೌಕರರಿಗೆ ಹದಿನೈದು ಸಾಂದರ್ಭಿಕ ಮತ್ತು 2 ಪರಿಮಿತ ರಜೆಯನ್ನು ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗೆ ಇಂದಿಲ್ಲಿ ಆದೇಶಿಸಿದ್ದಾರೆ.

2ನೆ ಶನಿವಾರ ರಜೆ ನೀಡಲಾಗಿದ್ದು, 2019ರ ಜೂನ್ 13ರಂದು ಎರಡನೆ ಶನಿವಾರ ಹಾಗೂ ನಾಲ್ಕನೆ ಶನಿವಾರವನ್ನು ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ, 15 ಸಾಂದರ್ಭಿಕ ರಜೆ 10ಕ್ಕೆ ಮಿತಿಗೊಳಿಸಲಾಗಿದೆ. ಆದರೆ, 2ನೆ ಮತ್ತು 4ನೆ ಶನಿವಾರ ರಜೆ ಪಡೆಯದ ಶಿಕ್ಷಣ-ಆರೋಗ್ಯ ಇಲಾಖೆ ನೌಕರರಿಗೆ ಅನಾನುಕೂಲವಾಗಿತ್ತು.

ಅವರಿಗೆ ಈ ಹಿಂದೆ ಇದ್ದ ವಾರ್ಷಿಕ 15 ಸಾಂದರ್ಭಿಕ ರಜೆ ಹಾಗೂ 2 ಪರಿಮಿತ ರಜೆಯನ್ನು ಮುಂದುವರಿಸಲು ಸರಕಾರಿ ನೌಕರರ ಸಂಘದ ಮನವಿ ಹಿನ್ನೆಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ನೌಕರರಿಗೆ 15 ಸಾಂದರ್ಭಿಕ ಮತ್ತು 2 ಪರಿಮಿತ ರಜೆ ಮುಂದುವರಿಸಲು ಸಿಎಂ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News