×
Ad

ಸಂವಿಧಾನ ರಚಿಸದಿದ್ದರೆ ನಾವಿನ್ನೂ ಗುಲಾಮರಾಗಿರಬೇಕಾಗಿತ್ತು: ಚಿಂತಕ ಶಿವಸುಂದರ್

Update: 2019-12-01 23:31 IST

ಮೈಸೂರು, ಡಿ.1: ದಲಿತರು, ಶೋಷಿತರು, ಮಹಿಳೆಯರಿಗೆ ಸ್ವಾತಂತ್ರ್ಯ ಸಿಕ್ಕಿದ್ದು ಸಂವಿದಾನ ಜಾರಿಯಾದಾಗ ಎಂದು ಲೇಖಕ, ಚಿಂತಕ ಶಿವಸುಂದರ್ ತಿಳಿಸಿದರು.

ನಂಜನಗೂಡಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ರವಿವಾರ ದಸಂಸ ವತಿಯಿಂದ ಆಯೋಜಿಸಿದ್ದ ಸಂವಿದಾನ ಜಾಗೃತಿ ಅರಿವು ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾವುಗಳು ಇಂದು ಬೇರೆ, ಬೇರೆ ಜಾತಿಯಲ್ಲಿ ಹುಟ್ಟಿರಬಹುದು. ಆದರೆ ನಮಗೆ ಸಮಾನತೆ ಸಿಕ್ಕಾಗ ಮಾತ್ರ ದೇಶದ ನಾಗರೀಕರಾಗುವುದು ಎಂದು ಹೇಳಿದರು. ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡದಿದ್ದರೆ ನಾವು ಇನ್ನೂ ಗುಲಾಮ ಸ್ಥಿತಿಯಲ್ಲೇ ಇರಬೇಕಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಎನ್.ಎಸ್.ಯೋಗೀಶ್ ಅವರನ್ನು ಸನ್ಮಾನಿಸಲಾಯಿತು. ಗುರುಪ್ರಸಾದ್ ಕೆರಗೋಡು, ಮಲ್ಲಹಳ್ಳಿ ನಾರಾಯಣ, ಸಿ.ಎಂ.ಅಂಕಯ್ಯ, ಆಲಗೂಡು ಶಿವಕುಮಾರ್, ಮಂಜು ಶಂಕರಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News