ಇಂಧನ ಸೋರಿಕೆಯಿಂದ ನಿಲ್ದಾಣದಲ್ಲಿಯೇ ನಿಂತ ರೈಲು: ಡೀಸೆಲ್ ತುಂಬಿಸಿಕೊಳ್ಳಲು ಮುಗಿಬಿದ್ದ ಜನತೆ

Update: 2019-12-03 13:43 GMT

ಹುಬ್ಬಳ್ಳಿ, ಡಿ.3: ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ ರೈಲಿನ ಇಂಜಿನ್ ಇಂಧನ ಸೋರಿಕೆಯಿಂದ ಬೆಂಗಳೂರಿಗೆ ಹೊರಡುವ ರೈಲು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಿಗಿ ರೈಲ್ವೆ ನಿಲ್ದಾಣದಲ್ಲಿಯೇ ನಿಂತುಕೊಂಡಿದ್ದು, ಸೋರಿಕೆಯಾಗುತ್ತಿದ್ದ ಡೀಸೆಲ್ ತುಂಬಿಸಿಕೊಳ್ಳುವಲ್ಲಿ ಸಾರ್ವಜನಿಕರು ಮುಗಿಬಿದ್ದ ಚಿತ್ರಣ ಕಂಡುಬಂತು.

ಮಂಗಳವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಡುವ 56516 ರೈಲಿನ ಎಂಜಿನ್‌ನಲ್ಲಿ ಇಂಧನ ಸೋರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ರೈಲನ್ನು ಯಲವಿಗಿಯಲ್ಲಿಯೇ ನಿಲುಗಡೆಗೊಳಿಸಲಾಯಿತು. ಇಂಧನ ಸೋರಿಕೆಯನ್ನು ಗಮನಿಸಿದ ಸಾರ್ವಜನಿಕರು ಬಕೆಟ್, ಕೊಡಗಳನ್ನು ತೆಗೆದುಕೊಂಡು ಡೀಸೆಲ್ ತುಂಬಿಸಿಕೊಳ್ಳುವಲ್ಲಿ ಮುಂದಾಗಿರುವುದು ಕಂಡು ಬಂದಿತು. ಇದರಿಂದ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಯಿತು.

ರೈಲ್ವೆಯ ಎಂಜಿನ್ ಕೆಟ್ಟಿದ್ದು ನಿಜ. ಆದರೆ, ಬೇರೆ ಎಂಜಿನ್ ಕಳುಹಿಸಲಾಗಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News