ಅನರ್ಹ ಶಾಸಕರನ್ನು ಸೋಲಿಸುವಂತೆ ಎಚ್‌ಡಿಕೆ ಮನವಿ
Update: 2019-12-03 21:47 IST
ಬೆಂಗಳೂರು, ಡಿ.3: ಸುಪ್ರೀಂಕೋರ್ಟ್ 17 ಶಾಸಕರನ್ನು ‘ಅನರ್ಹರು’ ಎಂದು ಪರಿಗಣಿಸಿದ್ದು, ಇಂಥವರನ್ನು ಯಾರೂ ಬೆಂಬಲಿಸಬಾರದು. ಇದನ್ನು ಮತದಾರರು ಸರಿಯಾಗಿ ಅರ್ಥ ಮಾಡಿಕೊಂಡು ಎಲ್ಲ ಅನರ್ಹರನ್ನು ಸೋಲಿಸಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.