ಮಂಗಳೂರು ಲಿಟ್‌ಫೆಸ್ಟ್ ಆಹ್ವಾನ ಪತ್ರಿಕೆಯಲ್ಲಿ ಕನ್ನಡ ಮುದ್ರಿಸದಿರುವುದು ಖಂಡನೀಯ: ಕನ್ನಡ ಗೆಳೆಯರ ಬಳಗ

Update: 2019-12-03 16:32 GMT

ಬೆಂಗಳೂರು, ಡಿ.3: ಕನ್ನಡ ಸಂಸ್ಕೃತಿ ಇಲಾಖೆಯ ನೆರವಿನಲ್ಲಿ ನಡೆದ ಮಂಗಳೂರು ಲಿಟ್‌ಫೆಸ್ಟ್ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕನ್ನಡ ಭಾಷೆಯಲ್ಲಿ ಮುದ್ರಿಸದಿರುವುದು ಖಂಡನೀಯವೆಂದು ಕನ್ನಡ ಗೆಳೆಯರ ಬಳಗ ಆಕ್ರೋಶ ವ್ಯಕ್ತಪಡಿಸಿದೆ.

ಕಳೆದ ನ.29-30ರಂದು ಮಂಗಳೂರಿನಲ್ಲಿ ‘ಮಂಗಳೂರು: ಲಿಟ್‌ಫೆಸ್ಟ್’ ನಡೆಯಿತು. ಅದನ್ನು ಕನ್ನಡದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಿದರು. ಹಿರಿಯ ಸಂಶೋಧಕ ಡಾ. ಎಂ.ಚಿದಾನಂದಮೂರ್ತಿಗೆ ಜೀವಮಾನದ ಸಾಧನೆಗೆ ಪ್ರಶಸ್ತಿ ನೀಡಲಾಯಿತು. ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕನ್ನಡವೇ ಇರಲಿಲ್ಲ. ರಾಜ್ಯ ಸರಕಾರದ ಸಹಯೋಗದಲ್ಲಿ ನಡೆಯವ ಕಾರ್ಯಕ್ರಮದ ಆಹ್ವಾನ, ವೇದಿಕೆಯ ಬ್ಯಾನರ್ ಕನ್ನಡದಲ್ಲಿರಬೇಕು. ಕನ್ನಡದ ಜೊತೆಗೆ ಬೇರೆ ಭಾಷೆಯಲ್ಲಿ ಮುದ್ರಿಸುವುದಾದರೆ ಕನ್ನಡ ಮೊದಲ ಸ್ಥಾನದಲ್ಲಿರಬೇಕು ಎಂಬ ಸ್ಪಷ್ಟ ಆದೇಶವಿದೆ. ಆದರೂ ಇದನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಸಂಸ್ಥೆಗೆ ಸರಕಾರ ನೀಡಿರುವ ನೆರವನ್ನು ಹಿಂದಕ್ಕೆ ಪಡೆಯಬೇಕೆಂದು ಪ್ರಕಟನೆಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News