ಅಖಿಲ ಭಾರತ ಮಿಂಚಿನ ಚೆಸ್ ಪಂದ್ಯಾವಳಿ: ಗ್ರಾಂಡ್ ಮಾಸ್ಟರ್ ಶಿವಮೊಗ್ಗದ ಸ್ಟ್ಯಾನಿ ಚಾಂಪಿಯನ್

Update: 2019-12-03 17:30 GMT

ಮಂಡ್ಯ, ಡಿ.3: ನಗರದ ಎಸ್.ಬಿ.ಸಮುದಾಯ ಭವನದಲ್ಲಿ ನಡೆದ ಅಖಿಲ ಭಾರತ ಮಿಂಚಿನ ಚೆಸ್ ಪಂದ್ಯಾವಳಿಯಲ್ಲಿ ರಾಜ್ಯದ ದ್ವಿತೀಯ ಗ್ರಾಂಡ್ ಮಾಸ್ಟರ್ ಶಿವಮೊಗ್ಗದ ಸ್ಟ್ಯಾನಿ ಜಿ.ಎ. ಚಾಂಪಿಯನ್ ಆಗಿದ್ದಾರೆ.

ಇಬ್ಬರು ಗ್ರಾಂಡ್ ಮಾಸ್ಟರ್ ಮತ್ತು ಇಬ್ಬರು ಅಂತಾರಾಷ್ಟ್ರೀಯ ಮಾಸ್ಟರ್ ಸೇರಿದಂತೆ ನೂರಕ್ಕೂ ಹೆಚ್ಚು ರೇಟಿಂಗ್ ಸ್ಪರ್ಧಿಗಳೊಂದಿಗೆ ನಡೆದ ಹನ್ನೊಂದು ಸುತ್ತುಗಳ ಪಂದ್ಯಾವಳಿಯಲ್ಲಿ ಸ್ಟ್ಯಾನಿ ಹತ್ತು ಪಾಯಿಂಟ್ ಗಳಿಸಿ 25 ಸಾವಿರ ನಗದು ಪುರಸ್ಕಾರದ ಜತೆಗೆ ಡಾ.ಎಚ್.ಡಿ.ಚೌಡಯ್ಯ ಗೌರವ ಕಪ್ ತನ್ನದಾಗಿಸಿಕೊಂಡರು.

ತಮಿಳುನಾಡಿನ ಅಂತಾರಾಷ್ಟ್ರೀಯ ಮಾಸ್ಟರ್ ನಿತಿನ್ ಎಸ್. ಒಂಬತ್ತೂವರೆ ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದರು. ಇವರು 18 ಸಾವಿರ ನಗದು ಬಹುಮಾನ, ಟ್ರೋಫಿ ಗಳಿಸಿದರು. ತಮಿಳುನಾಡಿನ ಅಶ್ವನ್ಟ್ ಆರ್. ಒಂಬತ್ತು ಪಾಯಿಂಟ್ ಗಳಿಸಿ ತೃತೀಯ ಸ್ಥಾನ ಪಡೆದು, 15 ಸಾವಿರ ನಗದು ಬಹುಮಾನ, ಟ್ರೋಫಿ ಪಡೆದರು. 

ಮಂಡ್ಯ ಚೆಸ್ ಅಕಾಡೆಮಿಯು ಅಖಿಲ ಭಾರತ ಚೆಸ್ ಸಂಸ್ಥೆ, ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಹಾಗು ಮಂಡ್ಯ ಜಿಲ್ಲಾ ಚೆಸ್ ಸಂಸ್ಥೆ ಸಹಯೋಗದೊಂದಿಗೆ ರಾಜ್ಯದಲ್ಲೇ ಮೊದಲ ಬಾರಿಗೆ ಮಂಡ್ಯದಲ್ಲಿ ಈ ಪಂದ್ಯಾವಳಿ ಆಯೋಜಿಸಿತ್ತು. ದೇಶಾದ್ಯಂತ ಒಟ್ಟು 329 ಸ್ಪರ್ಧಿಗಳು ಭಾಗವಹಿಸಿದ್ದರು. 

ಪಿಇಟಿ ಅಧ್ಯಕ್ಷ ಡಾ.ಎಚ್.ಡಿ.ಚೌಡಯ್ಯ, ಮಂಡ್ಯ ಜಿಲ್ಲಾ ಚೆಸ್ ಸಂಸ್ಥೆ ಅಧ್ಯಕ್ಷ ಟಿ.ವರಪ್ರಸಾದ್ ಪಂದ್ಯಾವಳಿಗೆ ಚಾಲನೆ ನೀಡಿದರು. ನಾಗಮಂಗಲದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಅಧೀಕ್ಷಕ ಎಂ.ಜಿ.ಎಂ.ಪ್ರಸಾದ್, ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಕಾರ್ಯದರ್ಶಿ ಆರ್.ಹನುಮಂತ, ಉಪಾಧ್ಯಕ್ಷ ಎಂ.ನಾಗೇಂದ್ರ, ಇತರ ಗಣ್ಯರು ವಿಜೇತರಿಗೆ ಒಟ್ಟು ಎರಡು ಲಕ್ಷ ನಗದು ಹಾಗೂ ನೂರಕ್ಕೂ ಹೆಚ್ಚು ಟ್ರೋಫಿಗಳನ್ನು ವಿತರಿಸಿದರು. 

ಮುಖ್ಯ ಆಯೋಜಕಿ, ಚೆಸ್ ಪಂದ್ಯಾವಳಿಯ ಮುಖ್ಯ ಆಯೋಜಕಿ, ಮಂಡ್ಯ ಜಿಲ್ಲಾ ಚೆಸ್ ಸಂಸ್ಥೆ ಸಹ ಕಾರ್ಯದಶಿ ಎನ್.ಮಾಧುರಿ ಜೈನ್, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News