ಕೋಳಿವಾಡ ಮನೆ ಮೇಲಿನ ಐಟಿ ದಾಳಿ ಬಗ್ಗೆ ಗೃಹ ಸಚಿವ ಬೊಮ್ಮಯಿ ಪ್ರತಿಕ್ರಿಯೆ

Update: 2019-12-04 17:39 GMT

ದಾವಣಗೆರೆ, ಡಿ.4: ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಸರ್ಕಾರ ಬೀಳುವುದಕ್ಕಿಂತ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸೋದು ಅವರ ಸೂಕ್ತ ಅನಿಸಿರಬೇಕು. ಈ ನಿಟ್ಟಿನಲ್ಲಿ ಸಿಹಿ ಹಂಚುವುದಾಗಿ ಹೇಳಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಯಿ ತಿಳಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಂತರ ವಿರೋಧ ಪಕ್ಷ ಸ್ಥಾನದಿಂದ ಸಿದ್ದರಾಮ್ಯಯ ಅವರು ಕೆಳಗೆ ಇಳಿಯಲಿದ್ದಾರೆ. ಇದನ್ನು ಉದಾಹರಿಸಿ ಕೊಂಡು ಸಿಹಿ ಹಂಚುತ್ತಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೋಳಿವಾಡ ಮನೆ ಮೇಲೆ ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ. ಚುನಾವಣಾಧಿಕಾರಿಗಳು ಐಟಿ ಇಲಾಖೆಯ ಸಹಾಯ ಪಡೆದು ದಾಳಿ ನಡೆಸಿದ್ದಾರೆ. ಇದರಲ್ಲಿ ನಮ್ಮ ಪಾತ್ರವಿಲ್ಲ. ನಮ್ಮ ಸಚಿವರ ವಾಹನಗಳನ್ನು ತಪಾಸಣೆ ಮಾಡಿದ್ದಾರೆ. ಅವರ ಕರ್ತವ್ಯ ಅವರು ಮಾಡಿದ್ದಾರೆ ಎಂದರು.   

ಲಿಂಗಾಯತರು ಬಿಜೆಪಿಗೆ ಮತ ಹಾಕದೆ ಇದ್ದರೆ ಯಡಿಯೂರಪ್ಪನವರ ಕೆನ್ನೆಗೆ ಹೊಡೆದಾಗೆ ಎಂಬ ಸಚಿವ ಮಾಧುಸ್ವಾಮಿ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಮಾಧುಸ್ವಾಮಿ ಬಳಿ ನಾನು ಮಾತಾಡುತ್ತೇನೆ, ಸತ್ಯಾಸತ್ಯತೆ ತಿಳಿದುಕೊಳ್ಳುತ್ತೇನೆ. ಬಳ್ಳಾರಿ ಡಿಸಿ ಸ್ವಯಂಕೃತ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.  

ಹನಿಟ್ರ್ಯಾಪ್ ಬಗ್ಗೆ ಪೊಲೀಸ್ ಅಧಿಕಾರಿಗಳು ಕಾನೂನು ಪ್ರಕಾರ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರ ಸತ್ಯ ಹೊರಬರಲಿದೆ ಎಂದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News