ಹನೂರು: ನಿರಂತರ ಮಳೆಗೆ 12 ಎಕರೆ ಬೆಳೆ ನಾಶ

Update: 2019-12-04 17:54 GMT

ಹನೂರು, ಡಿ.4: ಜಮೀನು ಹದಗೊಳಿಸಿ ಬಿತ್ತನೆ ಕಾರ್ಯ ಮಾಡಿ ಚೆನ್ನಾಗಿ ಬೆಳೆದು ಫಸಲು ಬರುವ ಹಂತದಲ್ಲಿದ್ದ ಸುಮಾರು 12 ಏಕರೆಯಲ್ಲಿ ಬೆಳೆದಿದ್ದ ರಾಗಿ ಮತ್ತು ಅವರೇಕಾಳು 4 ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ನಾಶವಾಗಿರುವ ಘಟನೆ ಹನೂರು ತಾಲೂಕಿನ ಮಲೈಮಹದೇಶ್ವರಬೆಟ್ಟ ಸಮೀಪದ ನಾಗಮಲೆ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮದ ಮಾದೇವತಂಬಡಿ, ಪುಟ್ಟುಬುದ್ದಿ, ನಾಗಣ್ಣ, ಮಾಯ, ನಾಗತಂಬಡಿ ಎಂಬ ರೈತರು ಬೆಳೆದಿದ್ದ ಫಸಲುಗಳು ನಿರಂತರ ಮಳೆಗೆ ನಾಶವಾಗಿದೆ. ಇದರಿಂದ ಈ ರೈತರು ಕಂಗಾಲಾಗಿದ್ದಾರೆ.

ಮಳೆಯಿಂದ ರೈತರು ಬೆಳದಿದ್ದ ಫಸಲು ಹಾಳಾಗಿದ್ದರಿಂದ ರೈತರಿಗೆ ನಷ್ಟವಾಗಿದ್ದು, ಕೂಡಲೇ ಸರಕಾರ ಎಚ್ಚೆತ್ತು ಈ ಭಾಗದ ರೈತರ ಕಷ್ಟಕ್ಕೆ ಧಾವಿಸಿ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News