ಅಧಿಕ ಮತಗಳ ಅಂತರದಿಂದ ಜನ ನನ್ನನ್ನು ಗೆಲ್ಲಿಸುತ್ತಾರೆ: ಬಿ.ಎಚ್.ಬನ್ನಿಕೋಡ

Update: 2019-12-05 12:23 GMT

ಹಾವೇರಿ, ಡಿ.5: ದುರಾಡಳಿತ, ಅನ್ಯಾಯ, ಅಕ್ರಮದ ವಿರುದ್ಧ ಮತದಾರರು ಮತ ಚಲಾಯಿಸಿ ನನ್ನನ್ನು 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂದು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ ತಿಳಿಸಿದ್ದಾರೆ. 

ಹಿರೇಕೆರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಜ್ಞನ ನಾಡಿನಲ್ಲಿ ಮೋಸದ ರಾಜಕಾರಣ ನಡೆಯಲ್ಲ. ಅನರ್ಹ ಶಾಸಕರನ್ನು ಜೀವನಪರ್ಯಂತ ಅನರ್ಹಗೊಳಿಸಿ ಅವರ ರಾಜಕೀಯ ಜೀವನವನ್ನು ಕೊನೆಗೊಳಿಸುವ ಶಕ್ತಿ ಮತದಾರರಲ್ಲಿದೆ ಎಂದು ತಿಳಿಸಿದರು. ಮುಂಬೈಗೆ ಪಲಾಯನ ಮಾಡಿ ಅನರ್ಹಗೊಂಡಿರುವ ಬಿ.ಸಿ.ಪಾಟೀಲರ ನಡತೆಯೇ ಅವರಿಗೆ ಮುಳುವಾಗಲಿದೆ. ಜನರೂ ಅವರ ವಿರುದ್ಧ ಮತ ಚಲಾಯಿಸುವ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News