ಕೋಲಾರ: ಕೊಳವೆ ಬಾವಿ ಕೊರೆಯುವಾಗ ಹೊರ ಚಿಮ್ಮಿದ ತೈಲ ಮಿಶ್ರಿತ ನೀರು

Update: 2019-12-05 16:12 GMT

ಕೋಲಾರ, ಡಿ.5: ಹೊಸದಾಗಿ ಕೊರೆಯುತ್ತಿರುವ ಕೊಳವೆ ಬಾವಿಯಿಂದ ತೈಲ ಮಿಶ್ರಿತ ಕೊಳಕು ನೀರು ಹೊರ ಚಿಮ್ಮುತ್ತಿರುವ ಘಟನೆ ಜಿಲ್ಲೆಯ ಮಾಲೂರು  ತಾಲೂಕಿನ ಗ್ರೀನ್ ಸಿಟಿ ಶಾಲೆ ಆವರಣದಲ್ಲಿ ನಡೆದಿದೆ.

ಮಾಲೂರಿನ ಗ್ರೀನ್ ಸಿಟಿ ಶಾಲೆ ಆವರಣದಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗುತ್ತಿದ್ದು, ಯಂತ್ರ 1,300 ಅಡಿ ಆಳ ತಲುಪುತ್ತಿದ್ದಂತೆ ಕೊಳವೆ ಬಾವಿಯಿಂದ ತೈಲ ಮಿಶ್ರಿತ ಕೊಳಕು ನೀರು ಹೊರಬರಲು ಶುರುವಾಗಿದೆ. ಇದರಿಂದ ಶಾಲೆ ಆಡಳಿತ ಮಂಡಳಿ ಹಾಗೂ ಸ್ಥಳೀಯರು ದಂಗಾಗಿದ್ದು, ಕೊಳವೆ ಬಾವಿ ಕೊರೆಸುವುದನ್ನು ಶಾಲಾ ಆಡಳಿತ ಮಂಡಳಿ ಸ್ಥಗಿತಗೊಳಿಸಿದೆ. ಸಾಮಾನ್ಯವಾಗಿ ಕೊಳವೆ ಬಾವಿ ಕೊರೆಯುವಾಗ ಮಣ್ಣು ಮಿಶ್ರಿತ ನೀರು ಹೊರಬರುತ್ತದೆ. ಆದರೆ ಮಾಲೂರಿನಲ್ಲಿ ತೈಲ ಮಿಶ್ರಿತ ಕೊಳಕು ನೀರು ಹೊರಚಿಮ್ಮುತ್ತಿದೆ.

ಸ್ಥಳಕ್ಕೆ ಹಿರಿಯ ಭೂ ವಿಜ್ಞಾನಿಗಳು ಹಾಗೂ ಅಂತರ್ಜಲ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News