ಮತದಾನ ಮಾಡಲು ತೆರಳಿದ್ದ ವೃದ್ಧೆ ಸಾವು
Update: 2019-12-05 21:53 IST
ಹಾವೇರಿ, ಡಿ.5: ಹಿರೇಕೆರೂರು ಉಪಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ತೆರಳುವಾಗ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಹಿರೇಕೆರೂರ ತಾಲೂಕಿನ ಆರೆಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 70 ವರ್ಷದ ಕಮಲವ್ವ ದೊಡ್ಡನಗೌಡರ ಹೊಟ್ಟೇರ ಮೃತ ವೃದ್ಧೆಯಾಗಿದ್ದಾರೆ. ಮನೆಯಿಂದ ಮತದಾನ ಮಾಡಲು ಹೊರಟಾಗ ರಸ್ತೆಯಲ್ಲಿ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.