×
Ad

ಸಾಮಾಜಿಕ ಜಾಣತಾಣದಲ್ಲಿ ಟ್ರೆಂಡ್ ಆದ 'ಹೌದೋ ಹುಲಿಯಾ...'

Update: 2019-12-05 21:59 IST

ಬೆಂಗಳೂರು, ಡಿ. 5: ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ವೇಳೆ ಅವರ ಅಭಿಮಾನಿಯೊಬ್ಬ ಹೇಳಿದ ‘ಹೌದೋ ಹುಲಿಯಾ..’ ಡೈಲಾಗ್ ಇದೀಗ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಣತಾಣದಲ್ಲಿ ಟ್ರೆಂಡ್ ಸೃಷ್ಟಿಸಿದೆ.

‘ಸ್ವಾಭಿಮಾನಿ ಮತದಾರ, ಹಣ-ಅಧಿಕಾರಕ್ಕಾಗಿ ತನ್ನನ್ನು ತಾನು ಬಿಜೆಪಿಗೆ ಮಾರಿಕೊಂಡ ಈ ಅನರ್ಹ ಬಂದಾಗ, ಛೀಮಾರಿ ಹಾಕಿದೆ, ಬಹಿಷ್ಕಾರ ಹಾಕಿದೆ, ಧಿಕ್ಕಾರ ಹಾಕಿದೆ, ಆಕ್ರೋಶ ವ್ಯಕ್ತಪಡಿಸಿದೆ, ಪ್ರಶ್ನೆಗಳ ಸುರಿಮಳೆಗೈದೆ, ಮತ ನೀಡುವುದಿಲ್ಲ ಎಂದೆ ಹೌದೋ ಹುಲಿಯಾ..’ ಎಂದು ಅನರ್ಹರನ್ನು ಸೋಲಿಸಿ ಎಂದು ಕಾಂಗ್ರೆಸ್ ಟ್ವಿಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News