ಕ್ರಿಮಿನಲ್‌ಗಳಿಗೆ ಎನ್‌ಕೌಂಟರ್ ಎಚ್ಚರಿಕೆಯ ಗಂಟೆ: ಗೃಹ ಸಚಿವ ಬೊಮ್ಮಾಯಿ

Update: 2019-12-06 12:55 GMT

ಹುಬ್ಬಳ್ಳಿ, ಡಿ. 6: ಅತ್ಯಾಚಾರ ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್‌ಕೌಂಟರ್ ಮಾಡಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಕ್ರಿಮಿನಲ್‌ಗಳಿಗೆ ಎನ್‌ಕೌಂಟರ್ ಎಚ್ಚರಿಕೆಯ ಗಂಟೆಯಾಗಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತೆಲಂಗಾಣ ಪೊಲೀಸರು ಸ್ಥಳೀಯ ಜನರ ಭಾವನೆಗಳಿಗೆ ಅನುಗುಣವಾಗಿ ಕ್ರಮ ಕೈಗೊಂಡಿದ್ದಾರೆ. ಎನ್‌ಕೌಂಟರ್ ಬಗ್ಗೆ ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ ಎಂದರು.

ಹೈದರಾಬಾದ್ ಪೊಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಒಂದು ವೇಳೆ ಆರೋಪಿಗಳು ತಪ್ಪಿಸಿಕೊಂಡು ಹೋಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು. ಅತ್ಯಾಚಾರ, ಹತ್ಯೆಯಂತಹ ಹೀನ ಕೃತ್ಯ ಮಾಡುವ ಆರೋಪಿಗಳಿಗೆ ಇದು ತಕ್ಕ ಶಿಕ್ಷೆಯಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಮೇಲ್ನೋಟಕ್ಕೆ ಪೊಲೀಸರು ಮಾಡಿದ ಕೆಲಸ ಉತ್ತಮ ಎಂದು ಕಾಣಿಸುತ್ತಿದೆ. ಅತ್ಯಾಚಾರ ಆರೋಪಿಗಳ ಮೇಲೆ ಎನ್‌ಕೌಂಟರ್ ನಡೆಸಿದ ಪೊಲೀಸ್ ಅಧಿಕಾರಿ ವಿಶ್ವನಾಥ ಸಜ್ಜನರ ದಕ್ಷ ಪೊಲೀಸ್ ಅಧಿಕಾರಿ. ಜತೆಗೆ ನಮ್ಮ ಕುಟುಂಬದ ಸ್ನೇಹಿತರೂ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News