ಉಪಚುನಾವಣೆ ಗೆಲುವಿನ ನಿರೀಕ್ಷೆಯಲ್ಲಿರುವ ಬಿಎಸ್‌ವೈಗೆ ಸಂಪುಟ ವಿಸ್ತರಣೆ ಸವಾಲು

Update: 2019-12-06 13:48 GMT

ಬೆಂಗಳೂರು, ಡಿ. 6: ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತ್ಮವಿಶ್ವಾಸದಲ್ಲಿದ್ದಾರೆ.

ಬಿಎಸ್‌ವೈ ತನ್ನ ನೇತೃತ್ವದ ಸರಕಾರ ಉಳಿಸಿಕೊಳ್ಳಲು ಉಪಚುನಾವಣೆಯಲ್ಲಿ ಕನಿಷ್ಠ 6 ಸ್ಥಾನಗಳನ್ನು ಗೆಲ್ಲಲೇಬೇಕು. ಜತೆಗೆ ಗೆದ್ದ ‘ಅನರ್ಹ’ರಿಗೆ ಚುನಾವಣೆಗೆ ಮೊದಲೇ ನೀಡಿರುವ ಆಶ್ವಾಸನೆಯಂತೆ ಸಚಿವ ಸ್ಥಾನ ನೀಡಬೇಕಿದೆ. ಎರಡು ಅಥವಾ ಮೂರು ಮೇಲ್ಮನೆ ಸ್ಥಾನಗಳನ್ನು ಭರ್ತಿ ಮಾಡಿ, ಸಂಪುಟ ವಿಸ್ತರಣೆ ಸವಾಲು ಅವರ ಮುಂದಿದೆ.

ಉಪಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕರೆ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ, ಅವರ ಸಲಹೆ, ಸೂಚನೆಯನ್ನು ಪಾಲಿಸಬೇಕು. ಸಂಪುಟಕ್ಕೆ ‘ಅನರ್ಹರು’ ಹಾಗೂ ಹಿರಿಯ ಶಾಸಕರಾದ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಕೆಲ ಸಮುದಾಯಗಳಿಗೂ ಪ್ರಾತಿನಿಧ್ಯ ಕಲ್ಪಿಸುವ ಅನಿವಾರ್ಯತೆ ಇದೆ.

ಸಚಿವ ಸಂಪುಟದ 34 ಸ್ಥಾನಗಳ ಪೈಕಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ 18 ಮಂದಿ ಸಂಪುಟದಲ್ಲಿದ್ದಾರೆ. ಇನ್ನೂ 16 ಸ್ಥಾನಗಳು ಸಂಪುಟದಲ್ಲಿ ಬಾಕಿ ಉಳಿದಿವೆ. ಉಪಚುನಾವಣೆ ಫಲಿತಾಂಶದ ಬಳಿಕ ಗೆದ್ದ ಅನರ್ಹರಿಗೆ ಹಾಗೂ ಪಕ್ಷದಲ್ಲಿನ ಹಿರಿಯ ಶಾಸಕರಿಗೆ ಸಂಪುಟ ಸ್ಥಾನ ನೀಡುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News