ಅತ್ಯಾಚಾರಿಗಳ ಎನ್‍ಕೌಂಟರ್ ಮಾನವಹಕ್ಕು ಉಲ್ಲಂಘನೆಯಲ್ಲ: ಪ್ರೊ.ಕೆ.ಎಸ್.ಭಗವಾನ್

Update: 2019-12-06 16:44 GMT

ಮೈಸೂರು, ಡಿ.6: ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿ ಸಾಯಿಸಿದ್ದನ್ನು ಮಾನವೀಯ ಮೌಲ್ಯಗಳುಳ್ಳ ಎಲ್ಲರೂ ಸ್ವಾಗತ ಮಾಡಬೇಕೆ ಹೊರತು ಇದರಲ್ಲಿ ಮಾನವಹಕ್ಕು ಉಲ್ಲಂಘನೆಯ ನೆಪ ಒಡ್ಡಬಾರದು ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಿಸಿದರು.

ನಾಲ್ವರನ್ನು ಎನ್‍ಕೌಂಟರ್ ಮಾಡಿರುವುದು ಮಾನವಹಕ್ಕು ಉಲ್ಲಂಘನೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ, ಅತ್ಯಾಚಾರಕ್ಕೆ ಒಳಗಾದ ಆ ಹೆಣ್ಣು ಮಗಳ ಸ್ಥಿತಿ ಎಂತಹದು ಎಂಬದು ಅರ್ಥಮಾಡಿಕೊಳ್ಳಬೇಕು. ಹಾಗಿದ್ದರೆ ಅದು ಮಾನವ ಹಕ್ಕು ಉಲ್ಲಂಘನೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಎನ್‍ಕೌಂಟರ್ ಅನ್ನು ಯಾರು ವಿರೋಧಿಸುತ್ತಿದ್ದಾರೋ ಅವರ ಮನೆಯಲ್ಲೇ ಇಂತಹ ಕೃತ್ಯ ನಡೆದಿದ್ದರೆ ಸುಮ್ಮನಿರುತ್ತಿದ್ದರೆ. ಮುಂದೆ ಇಂತಹ ಕೃತ್ಯ ಎಸಗುವವರಿಗೆ ಇದು ಪಾಠ ಎಂದು ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News