ಹೈದರಾಬಾದ್ ಎನ್‌ಕೌಂಟರ್ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ

Update: 2019-12-06 18:29 GMT

ಹೈದರಾಬಾದ್, ಡಿ. 6: ಪಶು ವೈದ್ಯೆ ದಿಶಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳ ಮೃತದೇಹವನ್ನು ಡಿಸೆಂಬರ್ 9ರಂದು ರಾತ್ರಿ 8 ಗಂಟೆ ವರೆಗೆ ಸಂಸ್ಕರಿಸಿ ಇರಿಸುವಂತೆ ತೆಲಂಗಾಣ ಉಚ್ಚ ನ್ಯಾಯಾಲಯ ಶುಕ್ರವಾರ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಪಶುವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್ ನಡೆಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸುವಂತ ಆಗ್ರಹಿಸಿ ನ್ಯಾಯವಾದಿ ಗುಣರತ್ನ ಸದಾವರ್ತೆಯೊಂದಿಗೆ ಮುಂಬೈ ಮೂಲದ ಹಲವು ನ್ಯಾಯವಾದಿಗಳು ಶುಕ್ರವಾರ ಸಿಜೆಐ, ಎನ್‌ಎಚ್‌ಆರ್‌ಸಿ ಹಾಗೂ ಡಿಐಜಿಪಿಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯೆ ಎನ್‌ಕೌಂಟರ್ ಕುರಿತು ವರದಿ ನೀಡುವಂತೆ ಕೇಂದ್ರ ಸರಕಾರ ತೆಲಂಗಾಣ ಸರಕಾರಕ್ಕೆ ನಿರ್ದೇಶನ ನೀಡಿರುವುದಾಗಿ ವರದಿಯಾಗಿದೆ.

ಎನ್‌ಕೌಂಟರ್ ಹೆಸರಿನಲ್ಲಿ 4 ಮಂದಿ ಆರೋಪಿಗಳ ಕಸ್ಟಡಿಯಲ್ಲಿ ಹತ್ಯೆಗೈದ ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐರ್ ದಾಖಲಿಸುವಂತೆ ಸಂಬಂಧಿತ ಇಲಾಖೆಗಳಿಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಸದಾವರ್ತೆ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ಕಚೇರಿ ಸ್ವೀಕರಿಸಿದ ರಿಟ್ ಅರ್ಜಿಯ ಹಿನ್ನೆಲೆಯಲ್ಲಿ ತೆಲಂಗಾಣ ಉಚ್ಚ ನ್ಯಾಯಾಲಯ ಈ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News