'ಸೋತವರಿಗೆ ಸಚಿವ ಸ್ಥಾನ': ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದು ಹೀಗೆ...
Update: 2019-12-07 18:16 IST
ಬೆಂಗಳೂರು, ಡಿ. 7: ಉಪಚುನಾವಣೆಯಲ್ಲಿ ಸೋಲು-ಗೆಲುವಿಗಿಂತ ಅಸ್ಥಿರತೆ ಮತ್ತು ಸ್ಥಿರತೆ ಬಗ್ಗೆ ರಾಜ್ಯದ ಜನ ಆಲೋಚಿಸಿದ್ದು, ಯಡಿಯೂರಪ್ಪ ಸರಕಾರವನ್ನು ಜನ ಬೆಂಬಲಿಸಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ 12ರಿಂದ 13 ಸ್ಥಾನಗಳನ್ನು ನಿಶ್ಚಿತವಾಗಿ ಗೆಲ್ಲಲ್ಲಿದೆ. ಬಿಎಸ್‌ವೈ ಅವರನ್ನು ಜನತೆ ಕೈಬಿಡುವುದಿಲ್ಲ. ನೂರಕ್ಕೆ ನೂರು ಬಿಜೆಪಿ ಸರಕಾರ ಮುಂದುವರಿಯಲಿದೆ ಎಂದರು.
ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ. ಆದರೆ, ಬಿಎಸ್‌ವೈ ಮಾತು ತಪ್ಪುವುದಿಲ್ಲ ಎಂದ ಸೋಮಣ್ಣ, ಬಿಎಸ್‌ವೈ ಕಾಲಿಗೆ ಚಕ್ರ ಕಟ್ಟಿಕೊಂಡು ಹದಿನೈದು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ ಎಂದರು.