ಎಸೆಸೆಲ್ಸಿ ಮೌಲ್ಯಮಾಪನಕ್ಕೆ ಶಾಲಾ ಶಿಕ್ಷಕರ ನೋಂದಣಿ ಕಡ್ಡಾಯ

Update: 2019-12-07 16:25 GMT

ಬೆಂಗಳೂರು, ಡಿ.7: ರಾಜ್ಯದ ಎಲ್ಲ ಸರಕಾರಿ ಮಾನ್ಯತೆ ಪಡೆದಿರುವ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವಿವರಗಳನ್ನು ಎಪ್ರಿಲ್-2020ರ ಎಸೆಸೆಲ್ಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕಾಗಿ ಶಾಲಾ ಲಾಗಿನ್‌ನಲ್ಲಿ ಆನ್‌ಲೈನ್‌ನ ಮೂಲಕ ನೋಂದಾಯಿಸಲು ಡಿ.6ರಿಂದ ಅವಕಾಶ ಕಲ್ಪಿಸಲಾಗಿದೆ. 

ಶಾಲೆಯ ಮುಖ್ಯ ಶಿಕ್ಷಕರು ತಮ್ಮನ್ನು ಸೇರಿದಂತೆ ಶಾಲೆಯ ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯಕ್ಕೆ ನೋಂದಾಯಿಸುವುದು ಹಾಗೂ 2018-19ನೇ ಸಾಲಿನಲ್ಲಿ ನೋಂದಾಯಿಸಿದ ಶಿಕ್ಷಕರ ವಿವರಗಳನ್ನೂ ಆಪ್‌ಡೇಟ್ ಮಾಡುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ನೋಂದಾಯಿಸದೇ ಇದ್ದಲ್ಲಿ ಅಂತಹ ಶಾಲಾ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ತಡೆಹಿಡಿಯಲಾಗುವುದು ಮತ್ತು ಅಂತಹ ಶಾಲಾ ಮುಖ್ಯಸ್ಥರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಪ್ರಕಟನೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News