ಉಪಚುನಾವಣೆಯಲ್ಲಿ ಬಿಜೆಪಿ 9 ಸ್ಥಾನ ಗೆಲ್ಲಲಿದೆ: ಶಾಸಕ ಎಸ್.ಎ.ರಾಮದಾಸ್

Update: 2019-12-07 17:19 GMT

ಮೈಸೂರು, ಡಿ.7: ಉಪಚುನಾವಣೆಯಲ್ಲಿ ಕನಿಷ್ಠ 9 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಉಪಚುನಾವಣೆಯಲ್ಲಿ 9 ಸ್ಥಾನವನ್ನು ಗೆಲ್ಲಲಿದ್ದೇವೆ. ಇನ್ನೂ ಮೂರು ವರ್ಷ ಬಿಜೆಪಿ ಸರ್ಕಾರವೇ ಆಡಳಿತ ನಡೆಸಲಿದೆ ಎಂದು ಹೇಳಿದರು.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಪಕ್ಷ ನನಗೆ ಯಾವ ಜವಾಬ್ದಾರಿಯನ್ನು ನೀಡುತ್ತದೊ ಅದನ್ನು ಪಾಲಿಸುವುದಷ್ಟೇ ನನ್ನ ಕೆಲಸ, ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕೆ.ಆರ್ ಕ್ಷೇತ್ರದ ಅಭಿವೃದ್ದಿ ಕಡೆ ಗಮನ ನೀಡುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News