ಅರವಿಂದ ಲಿಂಬಾವಳಿಯದ್ದು ಎನ್ನಲಾದ ಅಶ್ಲೀಲ ವಿಡಿಯೊ ನಕಲಿ: ಎಫ್‌ಎಸ್‌ಎಲ್ ವರದಿ

Update: 2019-12-10 18:01 GMT

ಬೆಂಗಳೂರು, ಡಿ.10: ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿಯದ್ದು ಎನ್ನಲಾದ ಅಶ್ಲೀಲ ವಿಡಿಯೊ ನಕಲಿ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕೃತವಾಗಿ ದೃಢೀಕರಿಸಿದೆ.

ಈ ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಇಲಾಖೆ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ನಕಲಿ ವಿಡಿಯೊ ಎಂದು ವರದಿ ನೀಡಿದೆ.

ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಅರವಿಂದ ಲಿಂಬಾವಳಿ ಅವರ ಬಹುಮುಖ್ಯ ಪಾತ್ರವಿದೆ. ಆದರೆ, ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವುದು ಬಿಜೆಪಿ ಪಕ್ಷದ ಒಳಗಿನ ಕೆಲ ನಾಯಕರಿಗೆ ಇಷ್ಟವಿರಲಿಲ್ಲ. ಅವರು ಬೇರೆ ಪಕ್ಷದವರು ಅಧಿಕಾರದಲ್ಲಿ ಇರಲಿ ಎನ್ನುವ ದುರುದ್ದೇಶ ಹೊಂದಿದ್ದರು. ಅಷ್ಟೇ ಅಲ್ಲದೆ, ಅರವಿಂದ ಲಿಂಬಾವಳಿ ಅವರು ಕೇಂದ್ರ ಬಿಜೆಪಿ ಮುಖಂಡರ ಜತೆ ಉತ್ತಮ ಸಂಬಂಧ ಹೊಂದಿದ್ದರು. ಇದರ ಪರಿಣಾಮವೇ ನಕಲಿ ವಿಡಿಯೋ ಸೃಷ್ಟಿಸಿ ತೇಜೋವಧೆ ಮಾಡಲಾಯಿತು ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News