ಮೈಸೂರು: ಬಿಷಪ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಯುವತಿ ಯು ಟರ್ನ್

Update: 2019-12-13 18:06 GMT

ಮೈಸೂರು,ಡಿ.13: ಮೈಸೂರಿನ ಬಿಷಪ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಸಂತ್ರಸ್ತೆ ಇದೀಗ ಏಕಾಏಕಿ ಯು ಟರ್ನ್ ಹೊಡೆದಿದ್ದಾರೆ.

'ನನಗೆ ನಿರಂತರವಾಗಿ ಕಿರುಕುಳ ನೀಡಲಾಗಿದೆ. ಜೀವ ಬೇದರಿಕೆ ಇದೆ ಎಂದು ಮೈಸೂರಿನ ಬಿಷಪ್ ವಿರುದ್ಧ ಸಂತ್ರಸ್ತೆ ಒಂದು ತಿಂಗಳ ಹಿಂದೆ ಆರೋಪಿಸಿ ಕಣ್ಣೀರು ಹಾಕಿದ್ದರು. ಈ ಬಗ್ಗೆ ಸೆಲ್ಫಿ ವಿಡಿಯೋ ದಾಖಲು ಮಾಡಿದ್ದ ಸಂತ್ರಸ್ತೆ ಸ್ವತಃ ತನ್ನದೇ ಹಸ್ತಾಕ್ಷರದಲ್ಲಿ ದೂರು ನೀಡಿದ್ದಳು ಎನ್ನಲಾಗಿದೆ.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಯುವತಿ, ನನಗೆ ಬಿಷಪ್ ಕಡೆಯಿಂದ ತೊಂದರೆ ಆಗಿಲ್ಲ. ಯಾರೋ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡು, ದೂರು ಬರೆಸಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಸಂತ್ರಸ್ತೆ ಉಲ್ಟಾ ಹೊಡೆದಿದ್ದಾಳೆ.

"ನನಗೆ ಬಿಷಪ್ ಕಡೆಯಿಂದ ಕಿರುಕುಳ ಆಗಿಲ್ಲ. ಯಾರೋ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡು, ದೂರು ಬರೆಸಿಕೊಂಡಿದ್ದಾರೆ. ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ಹೇಳಿಕೆ ನೀಡಿದರು. ಆದರೆ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡವರ ಹೆಸರನ್ನು ಸಂತ್ರಸ್ತೆ ಹೇಳಿಲ್ಲ. ಹೀಗಾಗಿ ಸಂತ್ರಸ್ತೆಯ ನಡೆಯಿಂದ ಅನುಮಾನ ಉಂಟಾಗಿದ್ದು, ಸಂತ್ರಸ್ತೆ ಸ್ಪಷ್ಟನೆ ನೀಡಲು ಬಂದು ಪೇಚಿಗೆ ಸಿಲುಕಿದ್ದಾಳೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News