ಬಂಡೀಪುರ: ಕಾಡ್ಗಿಚ್ಚು ಕಣ್ಗಾವಲಿಗೆ ಡ್ರೋಣ್ ಕ್ಯಾಮರಾ ಬಳಕೆ

Update: 2019-12-13 18:19 GMT

ಚಾಮರಾಜನಗರ: ಬೇಸಿಗೆ ಬಂತೆಂದರೆ ಕಾಡುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಬಂಡೀಪುರ ಅರಣ್ಯ ಇಲಾಖೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ದ್ರೊಣ್ ಕ್ಯಾಮರಾ ಬಳಕೆ ಮಾಡಲು ಮುಂದಾಗಿದೆ.

ಕಳೆದ ವರ್ಷ ಬಂಡೀಪುರ ಅರಣ್ಯದಲ್ಲಿ ಬೆಂಕಿ ಹೊತ್ತಿಕೊಂಡು 15 ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿತ್ತು. ಆ ಸಂದರ್ಭದಲ್ಲಿ ಸುಮಾರು ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರು. ಸಮರ್ಪಕವಾಗಿ ಬೆಂಕಿಯನ್ನು ನಿಯಂತ್ರಿಸಲಾಗದೆ ಕಾಡು ಧಗಧಗಿಸಿದ್ದರಿಂದ ಎಚ್ಚೆತ್ತಿರುವ ಅರಣ್ಯ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಾಡಂಚಿನಲ್ಲಿ ಡ್ರೋಣ್ ಬಳಸಲು ನಿರ್ಧರಿಸಿದೆ. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯ, ಕುಂದಕರೆ ವಲಯ ಹಾಗೂ ಮದ್ದೂರು ವಲಯಗಳ ಕಾಡಂಚಿನಲ್ಲಿ ಮೂರು, ನಾಲ್ಕು ಡ್ರೋಣ್ ಕ್ಯಾಮಾರಾಗಳನ್ನು ಬಳಸಿ ಕಾಡಿನ ಮೇಲೆ ನಿಗಾ ಇಡಲಿದೆ.

ಪ್ರತಿ ವಲಯಕ್ಕೂ 40ರಿಂದ 50 ಜನ ಸಿಬ್ಬಂದಿಗಳ ನೇಮಕ ಮಾಡುವ ಜೊತೆಗೆ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಕೂಡ ಬೆಂಕಿ ಬೀಳದಂತೆ ನಿರ್ವಹಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಬಂಡಿಪುರದ ಒಟ್ಟು13 ವಲಯಕ್ಕೂ ಸೇರಿದಂತೆ ಸುಮಾರು 800 ಕ್ಕೂ ಹೆಚ್ಚು ಸಿಬ್ಬಂದಿಗಳ ಫೈಯರ್ ವಾಚರ್ಸ್ ನೇಮಕ ಮಾಡಲಾಗುತ್ತದೆ. ಇದರ ಜೊತೆಗೆ ಡ್ರೋಣ್ ಕ್ಯಾಮರಾ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಸೋಲಿಗ ಸಮುದಾಯದ ಸಹಕಾರವನ್ನು ಕೂಡ ನಾವು ತೆಗೆದುಕೊಳ್ಳುವ ನಿಟ್ಟಿನಲ್ಲಿ ನಾವು ನಿರ್ಧಾರ ಮಾಡಿದ್ದೇವೆ. ಈ ಬಾರಿ ಫೈರ್ ವಾಚರ್ಸ್ ಕೆಲಸ ಮಾಡುವ ಎಲ್ಲರಿಗೂ ಇನ್ಶುರೆನ್ಸ್ ಮಾಡಿಸಲಾಗುತ್ತದೆ. ಏನಾದರೂ ದುರಂತಗಳು ಸಂಭವಿಸಿದರೆ ಅದರಿಂದ ಅವರಿಗೆ ಸಹಕಾರಿಯಾಗಲಿದೆ. ಅದಕ್ಕೂ ಕೂಡ ಕ್ರಮವಹಿಸಲಾಗಿದೆ ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News