ಶಿವಮೊಗ್ಗ: ಲಕ್ಷಾಂತರ ರೂ. ಮೌಲ್ಯದ ಸಾಗುವಾನಿ ನಾಟಗಳ ವಶ

Update: 2019-12-14 17:27 GMT

ಶಿವಮೊಗ್ಗ, ಡಿ.14: ಚನ್ನಗಿರಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ, ಲಕ್ಷಾಂತರ ರೂ. ಮೌಲ್ಯದ ಸಾಗುವಾನಿ ಮರಗಳ ತುಂಡುಗಳನ್ನು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.

ಭದ್ರಾವತಿ ತಾಲೂಕು ಬೆಳ್ಳಿಗೆರೆ ಗ್ರಾಮದ ವಾಸಿ, ದೊಡ್ಡೇರಿ ಗ್ರಾಮ ಪಂಚಾಯತ್ ಸದಸ್ಯ ವಾಸು ಎಂಬವರು ಕಾನೂನುಬಾಹಿರವಾಗಿ ಅರಣ್ಯದಲ್ಲಿ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ, 40 ತುಂಡುಗಳನ್ನು ಗುಪ್ತವಾಗಿ ಸಂಗ್ರಹಿಸಿಟ್ಟುಕೊಂಡಿದ್ದರು. ಈ ಕುರಿತಂತೆ ಪೊಲೀಸ್ ಅರಣ್ಯ ಸಂಚಾರಿ ದಳಕ್ಕೆ ಖಚಿತ ಮಾಹಿತಿ ಲಭಿಸಿದ್ದು, ಇದರ ಆಧಾರದ ಮೇಲೆ ದಾಳಿ ನಡೆಸಿ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳ ಮೌಲ್ಯ 2 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ತುಂಡುಗಳನ್ನು ಭದ್ರಾವತಿ ವಲಯ ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ.

ದಾಳಿಯ ನೇತೃತ್ವವನ್ನು ಪ್ರಭಾರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಮತ್ತವರ ಸಿಬ್ಬಂದಿಗಳಾದ ರವಿ, ಶಿವಲಿಂಗ, ಉಮೇಶ್, ನೀಲಾವತಿ, ಕೃಷ್ಣ, ರಾಘವೇಂದ್ರ ವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News