ಜಿರಾಫೆ ದಾಖಲೆ ಪಯಣ...

Update: 2019-12-14 18:17 GMT

ಮೈಸೂರು ಪ್ರಾಣಿ ಸಂಗ್ರಹಾಲಯ ಶತಮಾನೋತ್ಸವ ಕಂಡಿದ್ದು, ಇಲ್ಲಿ ಯಾವಾಗಲೂ ಹೊಸ- ಹೊಸ ವಿಧಾನಗಳು ಜಾರಿಗೆ ತರುತ್ತಲೇ ಇವೆ. ಇದೀಗ ನಗರದ ಚಾಮರಾಜೇಂದ್ರ ಮೃಗಾಲಯದ ಅಧಿಕಾರಿಗಳು ಹೊಸ ಸಾಧನೆಯೊಂದನ್ನು ಮಾಡಿದ್ದಾರೆ. ಮೈಸೂರು ಚಾಮರಾಜೇಂದ್ರ ಮೃಗಾಲಯದಿಂದ ಬರೋಬ್ಬರಿ 3,200 ಕಿ.ಮೀ. ದೂರದ ಅಸ್ಸಾಂ ರಾಜ್ಯದ ಗುವಾಹಟಿ ಮೃಗಾಲಯಕ್ಕೆ ಜಿರಾಫೆಯೊಂದನ್ನು ವಾಹನದಲ್ಲಿ ರವಾನಿಸಲಾಗಿದೆ. ಇಷ್ಟು ದೂರು ಜಿರಾಫೆಯನ್ನು ತೆಗೆದುಕೊಂಡು ಹೋಗಿದ್ದು ದೇಶದಲ್ಲಿ ಇದೇ ಮೊದಲು. ಬರೋಬ್ಬರಿ 12 ಅಡಿ ಎತ್ತರ ಹಾಗೂ 14 ತಿಂಗಳ ವಯಸ್ಸಿನ ಈ ಜಿರಾಫೆ ಸತತ 8 ದಿನ ವಿಶೇಷ ಟ್ರಕ್‌ನಲ್ಲಿ ತನ್ನ ಬಹುದೂರದ ಟ್ರಿಪ್ ನಡೆಸಿದೆ. ಜಿರಾಫೆ ಡಿ.4ರಂದು ಗುವಾಹಟಿ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor