ಡಿಸಿಎಂ ಹುದ್ದೆ ಸೃಷ್ಟಿಗೆ ಅಸಮಾಧಾನವಿಲ್ಲ: ಲಕ್ಷ್ಮಣ ಸವದಿ

Update: 2019-12-15 14:52 GMT

ರಾಯಚೂರು, ಡಿ.15: ಇನ್ನೆರಡು ದಿನಗಳಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಸಂಬಂಧ ಕೇವಲ ಮಾಧ್ಯಮಗಳ ಗೊಂದಲವೇ ವಿನಃ, ಯಾವುದೇ ಸಚಿವರಲ್ಲಿ ಅಸಮಾಧಾನವಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆ ಸೃಷ್ಟಿಸುವ ವಿಷಯಕ್ಕೆ ಸಂಬಂಧಿಸಿ ಸಚಿವರು ಹಾಗೂ ಸಚಿವಾಕಾಂಕ್ಷಿಗಳಲ್ಲಿ ಯಾವುದೇ ಗೊಂದಲಗಳಿಲ್ಲ. ಮಾಧ್ಯಮಗಳು ಈ ರೀತಿಯ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಮತಗಳಿಲ್ಲ ಎಂದು ನುಡಿದರು.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿಯಂತ್ರಿಸಲು ಗಂಭೀರ ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ವಿವಿಧ ಮೂಲಭೂತ ಸೌಕರ್ಯ ನೀಡಲಾಗಿದೆ. ನೆರೆಯಿಂದ ನಷ್ಟವಾದ ಬೆಳೆ ಹಾಗೂ ಮನೆ ಹಾನಿ ಪರಿಹಾರ ಕೇಂದ್ರದಿಂದ ಎರಡನೆ ಹಂತದ ಪರಿಹಾರ ಬಂದಕೂಡಲೇ ಬಿಡುಗಡೆ ಮಾಡಲಾಗುತ್ತದೆ ಎಂದರು.

ಪೌರತ್ವ ಕಾಯ್ದೆ ಜಾರಿಯಿಂದ ಯಾರಿಗೂ ತೊಂದರೆಯಿಲ್ಲ. ಈ ಕಾಯ್ದೆ ಭಾರತೀಯ ಪೌರತ್ವವನ್ನು ಖಚಿತ ಪಡಿಸುವ ಉದ್ದೇಶದಿಂದ ಜಾರಿ ಮಾಡಲಾಗಿದೆ. ಕೆಲವರು ಇದನ್ನು ದಾರಿ ತಪ್ಪಿಉವ ಪ್ರಯತ್ನ ನಡೆಸಿದ್ದಾರೆ ಎಂದು ಅಪಾದಿಸಿದರು. ಇದೇ ವೇಳೆ ಸಾರಿಗೆ ಇಲಾಖೆಯಿಂದ 1200 ಹೊಸ ಬಸ್‌ಗಳ ಖರೀದಿಗೆ ಚಿಂತನೆ ನಡೆಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಚಿವ ಪ್ರಭು ಚೌವ್ಹಾಣ್, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ತ್ರಿವಿಕ್ರಮ ಜೋಷಿ, ಗಿರೀಶ ಕನಕವೀಡು ಸೇರಿದಂತೆ ಹಲವರಿದ್ದರು.

‘ಜ.1ರಿಂದ ಖರೀದಿ ಕೇಂದ್ರಗಳ ಆರಂಭ: ‘ತೊಗರಿ ಸೇರಿದಂತೆ ದರ ಕುಸಿತವಾಗಿರುವ ಕೃಷಿ ಉತ್ಪನ್ನಗಳನ್ನು ಖರೀದಿಗೆ ಜ.1ರಿಂದ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು. ಕೇಂದ್ರ ಸರಕಾರ 23 ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಲು ರಾಜ್ಯದಿಂದಲೂ ನೆರವು ನೀಡಲಾಗುವುದು’

-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News