ಡಿಎಫ್‍ಆರ್‍ಎಲ್ ಸಂಸ್ಥೆಗೆ 50 ಲಕ್ಷ ರೂ. ವಂಚನೆ: ಆರೋಪ

Update: 2019-12-15 17:24 GMT

ಮೈಸೂರು,ಡಿ.15: ಡಿಎಫ್‍ಆರ್‍ಎಲ್ ಅಡ್ಮಿನ್ ಅಸಿಸ್ಟೆಂಟ್(ಬಿ) ಮತ್ತು ಕ್ಯಾಷಿಯರ್ ಸೇರಿ 50 ರೂ. ಲಕ್ಷ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಡಿಎಫ್‍ಆರ್‍ಎಲ್ ನಲ್ಲಿ ಅಡ್ಮಿನ್ ಅಸಿಸ್ಟೆಂಟ್(ಬಿ) ಮತ್ತು ಕ್ಯಾಷಿಯರ್ ಆಗಿರುವ ಪವನ್ ಕುಮಾರ್ ಅವರು 50 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಎಂ.ಎಂ ರಸ್ತೆಯಲ್ಲಿರುವ ಕೇಂದ್ರ ಸರ್ಕಾರದ ಡಿ.ಎಫ್.ಆರ್.ಎನ್ ನಲ್ಲಿ ಅಡ್ಮಿನ್ ಅಸಿಸ್ಟೆಂಟ್ (ಬಿ) ಮತ್ತು ಕ್ಯಾಷಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಪವನ್ ಕುಮಾರ್ ಸಿಂಗ್ ಎಂಬುವವರು 2013ನೇ ಸಾಲಿನಿಂದ 2016ನೇ ಸಾಲಿನ ವರೆಗೆ 5 ವರ್ಷಗಳ ಅವಧಿಯಲ್ಲಿ ಡಿಎಫ್‍ಆರ್‍ಎಲ್ ಸಂಸ್ಥೆಗೆ ಸೇರಿದ 50 ಲಕ್ಷ ರೂ. ಗಳನ್ನು ಡಿಎಫ್‍ಆರ್‍ಎಲ್ ಸಂಸ್ಥೆಯ ಎಸ್.ಬಿ.ಐ ಬ್ಯಾಂಕ್ ನ ಎರಡು ಖಾತೆಗಳಿಂದ ತನ್ನ ಸ್ವಂತ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆಡಳಿತ ಮಂಡಳಿ ನಜರ್ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News