ವಿದ್ಯಾರ್ಥಿಗಳ ಹೋರಾಟವನ್ನು ಸರ್ವಾಧಿಕಾರದಿಂದ ಮೋದಿ ಸರಕಾರ ಹತ್ತಿಕ್ಕಲು ಹೊರಟಿದೆ: ಸಿದ್ದರಾಮಯ್ಯ

Update: 2019-12-16 12:03 GMT

ಬೆಂಗಳೂರು, ಡಿ. 16: ಬೆಳಗಾವಿಯ ಕಾಗವಾಡ ಕ್ಷೇತ್ರದಲ್ಲಿ ನನ್ನ ಭಾಷಣದ ವೇಳೆ ‘ಹೌದೋ ಹುಲಿಯಾ’ ಎಂದು ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟೀಮನಿ. ಅಷ್ಟೇ ಪ್ರೀತಿಯಿಂದ ಇಂದು ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ಇಂಥ ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಈತನೇ ನಿಜವಾದ ‘ಹುಲಿಯಾ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಪೀರಪ್ಪ ಕಟ್ಟೀಮನಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ‘ಸಾರ್ ನಿಮ್ಮಿಂದಾಗಿ ನಾನು ರಾಜ್ಯಕ್ಕೆ ಪರಿಚಯನಾದೆ’ ಎಂದು ಪೀರಪ್ಪ ಹರ್ಷ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನೀನು ರಾಜ್ಯಕ್ಕೆ ಪರಿಚಯ ಆಗಿದ್ದೀಯ’ ಎಂದು ಬೆನ್ನುತಟ್ಟಿದರು.

‘ನಾನು ಕಾಂಗ್ರೆಸ್ ಪಕ್ಷದ ಬೆಂಬಲಿಗ, ಸಿದ್ದರಾಮಯ್ಯ ಎಲ್ಲಿರುತ್ತಾರೋ ನಾನು ಅಲ್ಲಿಯೇ ಇರುತ್ತೇನೆ. ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆಂದು ಗೊತ್ತಾಯಿತು. ಹೀಗಾಗಿ ಖುದ್ದು ಭೇಟಿ ಮಾಡುವ ಆಸೆ ಇತ್ತು. ಅದು ಇಂದು ಈಡೇರಿದೆ’ ಎಂದು ಪೀರಪ್ಪ ಕಟ್ಟೀಮನಿ ಸ್ಪಷ್ಟಪಡಿಸಿದರು.

‘ಕಳೆದ ರಾತ್ರಿ ದಿಲ್ಲಿಯಲ್ಲಿ ‘ಬೇಲಿಯೇ ಎದ್ದು ಹೊಲಮೇದಂತೆ ಪೊಲೀಸರೆ ಕ್ಯಾಂಪಸ್‌ಗೆ ನುಗ್ಗಿ ನಡೆಸಿರುವ ದಾಂಧಲೆ ಮತ್ತು ವಿದ್ಯಾರ್ಥಿಗಳ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಕೇಂದ್ರ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಕೇಂದ್ರ ಸರಕಾರದ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿ ಸಮೂಹ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಸರ್ವಾಧಿಕಾರಿ ಧಿಮಾಕಿನಿಂದ ಹತ್ತಿಕ್ಕಲು ಹೊರಟಿರುವ ಮೋದಿ ಸರಕಾರದ ನಡೆ ಖಂಡನೀಯ’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News