ಎಚ್.ಎಸ್.ದೊರೆಸ್ವಾಮಿ ಪತ್ನಿ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಸಂತಾಪ

Update: 2019-12-18 17:24 GMT

ಬೆಂಗಳೂರು, ಡಿ.18: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಅವರ ಪತ್ನಿ ಲಲಿತಮ್ಮ(90) ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಘಟಕದ ಅಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಲಲಿತಮ್ಮ ಅವರು ದೊರೆಸ್ವಾಮಿ ಅವರ ಸತ್ಯ ಮತ್ತು ನ್ಯಾಯದ ಪರ ಹೋರಾಟಕ್ಕೆ ಬದುಕಿನುದ್ದಕ್ಕೂ ಸದಾ ಬೆನ್ನಲುಬಾಗಿದ್ದರು. ಅವರ ತ್ಯಾಗ ಮತ್ತು ಸಹನೆ ನಿಜಕ್ಕೂ ಮೆಚ್ಚುವಂತಹದ್ದು. ತಮ್ಮ ಇಳಿವಯಸ್ಸಿನಲ್ಲಿಯೂ ಅವರು ಪತಿಯ ಸೇವೆಯಲ್ಲಿ ಯಾವ ಕೊರತೆಯನ್ನು ಮಾಡದೇ ಅವರ ಎಲ್ಲ ಬಗೆಯ ಅವಶ್ಯಕತೆಗಳನ್ನು ಪೂರೈಸುತ್ತಾ, ಅವರು ನಂಬಿದ ಸಿದ್ಧಾಂತವನ್ನು ಸದಾ ಬೆಂಬಲಿಸುವವರಾಗಿದ್ದರು ಎಂದು ಮುಹಮ್ಮದ್ ಸಾದ್ ಸ್ಮರಿಸಿದ್ದಾರೆ.

ದೇವನು ದೊರೆಸ್ವಾಮಿ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ಹಾಗೂ ಸಾಮರ್ಥ್ಯವನ್ನು ದಯಪಾಲಿಸಲಿ ಎಂದು ಅವರು ಸಂತಾಪ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News