ರಾಜ್ಯ ಸರಕಾರ ಮಂಗಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ: ಸಿದ್ದರಾಮಯ್ಯ
Update: 2019-12-20 18:30 IST
ಬೆಂಗಳೂರು, ಡಿ.20: ರಾಜ್ಯ ಸರಕಾರ ಮಂಗಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ. ಅಲ್ಲಿನ ಪರಿಸ್ಥಿತಿ ಅಧ್ಯಯನಕ್ಕೆ ಹೋಗಿರುವ ಶಾಸಕ ರಮೇಶ್ ಕುಮಾರ್, ವಿ.ಎಸ್.ಉಗ್ರಪ್ಪ ಸೇರಿದಂತೆ ನಮ್ಮ ಪಕ್ಷದ ನಾಯಕರನ್ನು ವಿಮಾನ ನಿಲ್ದಾಣದಲ್ಲಿಯೆ ತಡೆದು ಬಂಧಿಸಿರುವುದು ರಾಜ್ಯದಲ್ಲಿ ಅಘೋಷಿತ ‘ತುರ್ತುಪರಿಸ್ಥಿತಿ’ ಇರುವುದಕ್ಕೆ ಸಾಕ್ಷಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನನ್ನ ಆರೋಗ್ಯ ಸ್ಥಿತಿಯನ್ನೂ ಲೆಕ್ಕಿಸದೆ, ವೈದ್ಯರ ಸಲಹೆಯನ್ನೂ ನಿರ್ಲಕ್ಷಿಸಿ ಗಲಭೆಗ್ರಸ್ತ ಮಂಗಳೂರಿಗೆ ಹೊರಟಿದ್ದೆ. ಪೊಲೀಸರು ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನ ಇಳಿಯಲು ಅನುಮತಿ ನಿರಾಕರಿಸಿ ನನ್ನ ಪ್ರವಾಸಕ್ಕೆ ತಡೆಯೊಡ್ಡಿದ್ದಾರೆ. ಬಿಜೆಪಿ ಸರಕಾರ ಏನನ್ನು ಬಚ್ಚಿಡಲು ಹೊರಟಿದೆ? ಎಂದು ಅವರು ಪ್ರಶ್ನಿಸಿದ್ದಾರೆ.